ಹೈದ್ರಾಬಾದ್: ಕೊರೋನಾ ಸಂಕಷ್ಟದಿಂದ ಕೆಲಸ ಕಳೆದುಕೊಂಡ ಮಹಿಳಾ ಟೆಕ್ಕಿಯೊಬ್ಬರು ತರಕಾರಿ ಮಾರುತ್ತಿದ್ದಾರೆ.
ಹೈದ್ರಾಬಾದ್ ಮೂಲದ ಟೆಕ್ಕಿ ಉನ್ನಾದಾದಿ ಶಾರದಾ ಒಂದು ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೊರೋನಾದಿಂದ ಕೆಲಸ ಕಳೆದುಕೊಂಡ ಬಳಿಕ ಜೀವನ ನಿರ್ವಹಣೆಗಾಗಿ ತರಕಾರಿ ಮಾರಲು ಆರಂಭಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಸೋನು ಸೂದ್ ದೂರವಾಣಿ ಮೂಲಕ ಶಾರದಾ ಸಂಪರ್ಕಿಸಿ ಸಹಾಯದ ಭರವಸೆ ನೀಡಿದ್ದಾರೆ. ಕೊರೋನಾ ಸೋಂಕು ಜನರನ್ನು ಕಾಡಲಾರಂಭಿಸಿದಾಗಿನಿಂದಲೂ ಜನರು ಹಾಗೂ ಕಾರ್ಮಿಕರ ನೆರವಿಗೆ ಧಾವಿಸಿದ್ದ ನಟ ಸೋನುಸೂದ್ ಇದೀಗ ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿರುವ ಯುವತಿ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಶಾರದಾ ನಾನು ಮೊದಲು ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಕೊವೀಡ್-19 ನಿಂದ ನಾನು ಕೆಲಸ ಕಳೆದುಕೊಂಡೆ. ಜೀವನ ನಿರ್ವಹಣೆ ಕಷ್ಟವಾದ್ದರಿಂದ ತರಕಾರಿ ಮಾರಲಾರಂಭಿಸಿದೆ. ಆದರೆ ಈ ಬಗ್ಗೆ ಮಾಹಿತಿ ಪಡೆದ ನಟ ಸೋನು ಸೂದ್ ನನಗೆ ಕೆಲಸದ ಭರವಸೆ ನೀಡಿದ್ದಾರೆ. ಈಗಾಗಲೇ ಇಂಟರವ್ಯೂ ಕೂಡ ನಡೆದಿದ್ದು ಕೊನೆಯ ನಿರ್ಣಯ ಬಾಕಿ ಇದೆ. ಇದು ಅವರ ಮಾನವೀಯತೆಗೆ ಸಾಕ್ಷಿ ಎಂದಿದ್ದಾರೆ.
ಹಾವು ಹಿಡಿದ ಸ್ವಾಮೀಜಿ…! ವಿಡಿಯೋ ವೈರಲ್…!
ಕೊರೋನಾದಲ್ಲಿ ತಮ್ಮ ಮಾನವೀಯತೆಯ ಮುಖ ತೋರಿಸಿದ ಸೋನು ಸೂದ್ ಈಗಾಗಲೇ ಲಕ್ಷಾಂತರ ಕಾರ್ಮಿಕರನ್ನು ಮುಂಬೈನಿಂದ ಮನೆಗೆ ತಲುಪಿಸುವ ಕೆಲಸ ಮಾಡಿದ್ದು, ಇತ್ತೀಚೆಗೆ ಪುಣಾದಲ್ಲಿ ರಸ್ತೆ ಪಕ್ಕದಲ್ಲಿ ಭೀಕ್ಷೆ ಬೇಡುವ ಅಜ್ಜಿ ಗೆ ನೆಲೆ ಕಲ್ಪಿಸಿದ್ದರು.