Monday, September 27, 2021

ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಜಡ್ಜ್ ಆಗ್ರಹ…!

Follow Us

newsics.com
ಚೆನ್ನೈ:
ನೀಟ್ ಪರೀಕ್ಷೆ ವಿಚಾರದಲ್ಲಿ ನ್ಯಾಯಾಲಯದ ಬಗ್ಗೆ ಲಘುವಾಗಿ ಮಾತನಾಡಿದ ಆರೋಪದ ಮೇರೆಗೆ ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಸ್ವತಃ ನ್ಯಾಯಾಧೀಶರೇ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ತಮಿಳು ನಟ ಸೂರ್ಯ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ‘ಕೊರೋನಾ ವೈರಸ್ ಭಯದಿಂದ ತಮ್ಮ ಜೀವಕ್ಕೆ ಹೆದರಿ ವಿಡಿಯೋ ಮೂಲಕ ನ್ಯಾಯದಾನ ಮಾಡುವ ನ್ಯಾಯಾಲಯ ವಿದ್ಯಾರ್ಥಿಗಳು ಮಾತ್ರ ನಿರ್ಭಯವಾಗಿ ಹೋಗಿ ಪರೀಕ್ಷೆ ಬರೆಯುವಂತೆ ಆದೇಶಿಸುತ್ತದೆ’ ಎಂದು ತಮಿಳಿನಲ್ಲಿ ಟ್ವೀಟ್ ಮಾಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ ನ್ಯಾಯಾಧೀಶ ಎಸ್.ಎಂ.ಸುಬ್ರಹ್ಮಣಿಯಂ, ನ್ಯಾಯಾಂಗದ ಬಗ್ಗೆ ಕೀಳಾಗಿ ಟೀಕಿಸಿದ ನಟನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು. ಆ ಮೂಲಕ ನ್ಯಾಯಾಂಗದ ಘನತೆ ಎತ್ತಿ ಹಿಡಿಯಬೇಕೆಂದು ಮುಖ್ಯ ನ್ಯಾಯಮೂರ್ತಿ ಅಮರೇಶ್ವರ್ ಪ್ರತಾಪ್ ಸಾಹಿಗೆ ಪತ್ರ ಬರೆದಿದ್ದಾರೆ.
ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಗೂ ಮುನ್ನ ನಾಲ್ವರು ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ನಟ ಸೂರ್ಯ ಈ ರೀತಿ ಟ್ವೀಟ್ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾರತದ ಮೂರು ಹಳ್ಳಿ ಕಬಳಿಸಲು ನೇಪಾಳ ಕಸರತ್ತು

ಸುಪ್ರೀಂಗೆ ಒಂದು ರೂ. ದಂಡ ಪಾವತಿಸಿದ ಪ್ರಶಾಂತ್‌ ಭೂಷಣ್

ಸೆ.21ರಿಂದ ಶಾಲಾ-ಕಾಲೇಜು ಆರಂಭ; ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಮತ್ತಷ್ಟು ಸುದ್ದಿಗಳು

Latest News

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೆ ಅಪಘಾತ: ಇಬ್ಬರು ಟೆಕ್ಕಿಗಳ ಸಾವು

newsics.com ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಟೆಕ್ಕಿಗಳು ಅಸುನೀಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಫೇಸ್ 1 ಹಾಗೂ ಫೇಸ್ 2 ಬೆಸೆಯುವ ಲಿಂಕ್...

ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಪ್ರಧಾನಿ ಮೋದಿ ದಿಢೀರ್ ಭೇಟಿ

newsics.com ನವದೆಹಲಿ: ಪ್ರಧಾನಿ ನರೇಂದ್ರ‌ ಮೋದಿ ಭಾನುವಾರ ರಾತ್ರಿ ಹೊಸ ಸಂಸತ್‌ ಕಟ್ಟಡದ‌ ನಿರ್ಮಾಣ ಸ್ಥಳಕ್ಕೆ ದಿಢೀರ್ ಭೇಟಿ‌ ನೀಡಿದರು. ಅಮೆರಿಕದಿಂದ ಹಿಂದಿರುಗಿ 24 ಗಂಟೆಗಿಂತಲೂ ಮುಂಚೆ ಪ್ರಧಾನಿ ಮೋದಿ ಭಾನುವಾರ ರಾತ್ರಿ 8: 45...

ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್’ಗೆ 54 ರನ್’ಗಳ ಭರ್ಜರಿ ಜಯ

newsics.com ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಲ್ ಪಂದ್ಯದಲ್ಲಿ 54 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ನಾಯಕ ವಿರಾಟ್ ಕೊಹ್ಲಿ (51) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್...
- Advertisement -
error: Content is protected !!