newsics.com
ಮುಂಬೈ: ಡ್ರಗ್ಸ್ ವಿಚಾರವನ್ನು ಮುಂದಿಟ್ಟುಕೊಂಡು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಶುಕ್ರವಾರ ನಾಲ್ವರನ್ನು ಬಂಧಿಸಿದೆ.
ಬಂಧಿತರಿಂದ ಸಾಕಷ್ಟು ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ ಸಿ ಬಿ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯೊಬ್ಬನ ಮನೆ ಮೇಲೆ ದಾಳಿ ನಡೆಸಿ, 928 ಗ್ರಾಂ ಚರಸ್ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಶಂಕಿತರನ್ನು ಪ್ರತ್ಯೇಕವಾಗಿ ಬಂಧಿಸಿರುವ ತನಿಖಾ ದಳ, ಸುಮಾರು 500 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿರುವುದಾಗಿ ಎನ್ ಸಿ ಬಿ ಹೇಳಿದೆ. ಈ ಹಿಂದೆ ತನಿಖಾ ತಂಡದಿಂದ ಬಂಧಿಸಲಾಗಿದ್ದ ಅಂಕುಶ್ ಅರೆಂಜಾ ನೀಡಿದ ಮಾಹಿತಿ ಆಧರಿಸಿ ಮುಂಬೈನ ಎನ್ ಸಿಬಿ ತಂಡ ವರ್ಸೋವಾದಿಂದ ಶಂಕಿತನೊಬ್ಬನನ್ನು ಬಂಧಿಸಿದೆ. ಮತ್ತೆ ಮೂವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಎನ್ ಸಿ ಬಿ ಮೂಲಗಳು ತಿಳಿಸಿವೆ.
ನಟ ಸುಶಾಂತ್ ಸಾವು ಪ್ರಕರಣ; ಎನ್’ಸಿಬಿಯಿಂದ ನಾಲ್ವರ ಬಂಧನ, ಡ್ರಗ್ಸ್ ವಶ
Follow Us