ಕೋಲ್ಕತ್ತಾ: ಬಂಗಾಳಿ ಹಿರಿಯ ನಟ, ರಾಜಕಾರಣಿ ತಪಸ್ ಪಾಲ್ (61) ಹೃದಯಾಘಾತದಿಂದ ಮಂಗಳವಾರ ಮುಂಜಾನೆ ಮುಂಬೈನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು.
ಮುಂಬೈಗೆ ತನ್ನ ಪುತ್ರಿಯ ಮನೆಗೆ ತೆರಳಿದ್ದ ವೇಳೆ ಕೋಲ್ಕತ್ತಾಗೆ ವಾಪಸ್ ಆಗುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೃಷ್ಣನಗರದಿಂದ ಎರಡು ಬಾರಿ ಲೋಕಸಭೆ ಹಾಗೂ ಅಲಿಪೋರ್ ನಿಂದ ಒಮ್ಮೆ ವಿಧಾನಸಭೆಗೆ ಆಯ್ಕೆಯಾಗಿದ್ದ ಪೌಲ್ ಅವರಿಗೆ ಪುತ್ರಿ ಹಾಗೂ ಪತ್ನಿ ಇದ್ದಾರೆ.
ಬಂಗಾಳಿ ನಟ ತಪಸ್ ಪಾಲ್ ಇನ್ನಿಲ್ಲ
Follow Us