Monday, October 2, 2023

ಚಳ್ಳಕೆರೆಯಲ್ಲಿ ಏರೋನಾಟಿಕಲ್ ಟೆಸ್ಟ್: RLV-LEX ಯಶಸ್ವಿ ಹಾರಾಟ

Follow Us

newsics.com

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ RLV-LEX ಯಶಸ್ವಿ ಹಾರಾಟ ನಡೆಸಿದೆ.

ಈ‌ ಮೂಲಕ ಇಸ್ರೋ, ಐಎಎಫ್, ಡಿಆರ್‌ಡಿಒ ಸಂಸ್ಥೆಗಳು ಮತ್ತೊಂದು ಯಶಸ್ಸಿನ ಹೆಜ್ಜೆ ಇಟ್ಟಿವೆ. ಮರುಬಳಕೆ ಮಾಡಬಹುದಾದ ವಾಹನ(RLV)ದ ಆಟಾನಮಸ್‍ ಲ್ಯಾಂಡಿಂಗ್ ಮಿಷನ್ ಯಶಸ್ವಿಯಾಗಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ. ಡಿಆರ್‌ಡಿಒ ಜತೆಗೂಡಿ ಇಸ್ರೋ ಭಾನುವಾರ ಬೆಳಗ್ಗೆ, ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ರಿಯೂಸ್‌ಬಲ್ ಲಾಂಚ್ ವೆಹಿಕಲ್ ಆಟಾನಮಸ್‍ ಲ್ಯಾಂಡಿಂಗ್ ಮಿಷನ್(RLV LEX) ಯಶಸ್ವಿ ಪರೀಕ್ಷೆ ಮಾಡಲಾಗಿದೆ. ಭಾರತೀಯ ವಾಯುಪಡೆಯ ಚೆನೋಕ್ ಹೆಲಿಕಾಪ್ಟ್ ಮೂಲಕ ಆರ್‌ಎಲ್‌ವಿ ಬೆಳಗ್ಗೆ 7.10ಕ್ಕೆ ಟೇಕ್ ಆಫ್ ಆಯಿತು. ಆರ್‌ಎಲ್‌ವಿ ಬಿಡುಗಡೆಯು ಸ್ವಾಯತ್ತವಾಗಿತ್ತು. ನಂತರ ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ ಮತ್ತು ಕಂಟ್ರೋಲ್ ಸಿಸ್ಟಮ್ ಅನ್ನು ಬಳಸಿಕೊಂಡು 7:40ಕ್ಕೆ ಆಟಾನಮಸ್‍ ಲ್ಯಾಂಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿತು ಎಂದು ಇಸ್ರೋ ತಿಳಿಸಿದೆ.

ಈ ಮೂಲಕ ಬಾಹ್ಯಾಕಾಶ ವಾಹನದ ಆಟಾನಮಸ್‍ ಲ್ಯಾಂಡಿಂಗ್ ಅನ್ನು ಇಸ್ರೋ ಯಶಸ್ವಿಯಾಗಿ ಸಾಧಿಸಿ, ಮತ್ತೊಂದು ಹಂತಕ್ಕೆ ಏರಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಾಹ್ಯಾಕಾಶದಿಂದ ರಾಕೆಟ್ ಬಂದರೆ ಯಾವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆಯೋ ಅಂಥದ್ದೇ ಪರಿಸ್ಥಿತಿಯಲ್ಲಿ ಮರು ಬಳಸಬಹುದಾದ ಉಡಾವಣಾ ವಾಹನದ ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಯನ್ನು ಕೈಗೊಳ್ಳಲಾಯಿತು. ಮಾನವ ರಹಿತ ರಾಕೆಟ್, ಲ್ಯಾಂಡಿಂಗ್ ಹೈ ಸ್ಪೀಡ್ ಮತ್ತು ರಿಟರ್ನಿಂಗ್ ಸೇಮ್ ಪಾಥ್‌ನ ಸ್ಥಿತಿಗಳಲ್ಲಿ ಈ ಪರೀಕ್ಷೆಯನ್ನು ಕೈಗೊಳ್ಳಲಾಯಿತು.

ಕಾರು- ಲಾರಿ ಡಿಕ್ಕಿ: ಹಿರಿಯ‌ ಕಲಾವಿದ ಬೆಳಗಲ್ ವೀರಣ್ಣ ಸಾವು, ಮಗನ ಸ್ಥಿತಿ ಗಂಭೀರ

ಅಮೆರಿಕದಲ್ಲಿ ಭೀಕರ ಸುಂಟರಗಾಳಿ: 21 ಮಂದಿ ಸಾವು, ಜನಜೀವನ ಅಸ್ತವ್ಯಸ್ತ

ಕುರುಡಿಯಂತೆ ನಟನೆ, ಸಿಕ್ಕಿಬಿದ್ದ ಮಹಿಳೆ

ಮತ್ತಷ್ಟು ಸುದ್ದಿಗಳು

vertical

Latest News

ವರದಿಗಾರ್ತಿ ಮೇಲೆ ರೇಗಿದ ಅಣ್ಣಾಮಲೈ: ಖಂಡನೆ

newsics.com ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮಹಿಳಾ ವರದಿಗಾರರೊಬ್ಬರ ಮೇಲೆ ಸಿಟ್ಟಾಗುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ವರದಿಗಾರ್ತಿ ಜೊತೆ ಅಣ್ಣಾಮಲೈ ಮಾತನಾಡಿರುವ ವಿಡಿಯೋ...

ರಸ್ತೆ ಅಪಘಾತ: ಮಗು ಸೇರಿ ಕನಿಷ್ಠ 10 ಮಂದಿ ಸಾವು

newsics.com ಮೆಕ್ಸಿಕೊ: ಟ್ರಕ್ ವೊಂದು ಅಪಘಾತಕ್ಕೆ ಒಳಗಾದ ಪರಿಣಾಮ 10 ಜನ ವಲಸಿಗರು ಸಾವನ್ನಪಿರುವ ಘಟನೆ ದಕ್ಷಿಣ ರಾಜ್ಯ ಚೈಪಾಸ್ನಲ್ಲಿ ನಡೆದಿದೆ. ಅಪಘಾತದಲ್ಲಿ 17 ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಮತ್ತು ಗಾಯಾಳುಗಳು...

ಮೈಕಲ್ ಜಾಕ್ಸನ್ ಟೋಪಿ ಬರೋಬ್ಬರಿ 68 ಲಕ್ಷಕ್ಕೆ ಹರಾಜು

newsics.com ಜನಪ್ರಿಯ ವ್ಯಕ್ತಿಗಳು ಬಳಸಿರುವ ವಸ್ತುಗಳಿಗೆ ಭಾರಿ ಬೇಡಿಕೆ ಇರುತ್ತದೆ. ದೊಡ್ಡ ಪ್ರಮಾಣದ ಹಣ ತೆತ್ತು ಅವುಗಳನ್ನು ಖರೀದಿಸುವವರು ಇರುತ್ತಾರೆ. ಇದೀಗ ನೃತ್ಯಲೋಕದ ಅಚ್ಚಳಿಯದ ಹೆಸರು ಮೈಕಲ್ ಜಾಕ್ಸನ್ ಅವರು ಧರಿಸುತ್ತಿದ್ದ ಟೋಪಿ ಬರೋಬ್ಬರಿ...
- Advertisement -
error: Content is protected !!