ನವದೆಹಲಿ: ಅಪ್ಘಾನಿಸ್ತಾನದಲ್ಲಿ ಭಯೋತ್ಪಾದಕರು ಒಂದು ತಿಂಗಳ ಹಿಂದೆ ಅಪಹರಿಸಿದ್ದ ನಿದಾನ್ ಸಿಂಗ್ ಭಾರತಕ್ಕೆ ಆಗಮಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಅವರನ್ನು ಭಯೋತ್ಪಾದಕರು ಬಂಧಮುಕ್ತಗೊಳಿಸಿದ್ದರು. ಭಾರತದ ಗುಪ್ತಚರ ಸಂಸ್ಥೆ ಮತ್ತು ಅಪ್ಘಾನಿಸ್ತಾನದ ಬುಡುಕಟ್ಟು ಜನಾಂಗದ ನಾಯಕರು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪಾಕಿಸ್ತಾನ ಪ್ರೇರಿತ ಭಯೋತ್ಪಾದನಾ ಸಂಘಟನೆಗಳು ಅಪ್ಘಾನಿಸ್ತಾನದಲ್ಲಿ ಅಲ್ಪ ಸಂಖ್ಯಾತ ಸಿಖ್ ರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿವೆ. ಅಪ್ಘಾನಿಸ್ತಾನದಲ್ಲಿ ಗುರುದ್ವಾರದ ಮೇಲೆ ಇತ್ತೀಚೆಗೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 17ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ಅಪ್ಘಾನಿಸ್ತಾನದಲ್ಲಿ ಧಾರ್ಮಿಕ ಕಾರಣಗಳಿಗಾಗಿ ದೌರ್ಜನ್ಯಕ್ಕೆ ತುತ್ತಾಗಿರುವ ಎಲ್ಲ ಸಿಖ್ ಸಮುದಾಯದ ಜನರಿಗೆ ಆಶ್ರಯ ಕಲ್ಪಿಸಲು ಭಾರತ ನಿರ್ಧರಿಸಿದೆ. ಸುಮಾರು 200 ಸಿಖ್ ಸಮುದಾಯದ ಜನರು ಮುಂದಿನ ದಿನಗಳಲ್ಲಿ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.