newsics.com
ಚಾಮರಾಜನಗರ: ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಅರಣ್ಯಾಧಿಕಾರಿಗಳು ಜಂಟಿಯಾಗಿ ಕಳೆದ 21 ದಿನಗಳಿಂದ ನಡೆಸಿದ ಹುಲಿ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದೆ.
ತಮಿಳುನಾಡಿನಲ್ಲಿ ನಾಲ್ಕು ಮಂದಿಯನ್ನು ಕೊಂದಿದ್ದ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. 30ಕ್ಕೂ ಹೆಚ್ಚು ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗಿದ್ದವು.
ತಮಿಳುನಾಡಿನ ಮಧು ಮಲೈ ಅರಣ್ಯ ವ್ಯಾಪ್ತಿಯ ಮಸಣಿ ಗುಡಿ ವ್ಯಾಪ್ತಿಯ ಕೂಟು ಪಾರೈ ಎಂಬಲ್ಲಿ ಹುಲಿಯನ್ನು ಸೆರೆ ಹಿಡಿಯಲಾಗಿದೆ
ಅರವಳಿಕೆ ನೀಡುವ ಮೂಲಕ ಎಂಟು ವರ್ಷ ಪ್ರಾಯದ ಗಂಡು ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಇದೀಗ ಹುಲಿಯನ್ನು ವಂದಲೂರು ಮೃಗಾಲಯಕ್ಕೆ ಕಳುಹಿಸಲಾಗಿದೆ.