Wednesday, June 16, 2021

ಕೊರೋನಾದಿಂದ ಗುಣಮುಖರಾದರೂ ಮತ್ತೆ ಪಾಸಿಟಿವ್

ಚಂಡೀಗಢ: ಪಂಜಾಬ್‌ನ ಮೊಹಾಲಿ ಜಿಲ್ಲೆಯ ಡೇರಾ ಬಾಸ್ಸಿ ಪಟ್ಟಣದಲ್ಲಿ  ಕೊರೋನಾದಿಂದ ಗುಣಮುಖರಾದವರಲ್ಲಿ ಮತ್ತೆ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿದೆ. ಇದು ಆತಂಕ ಸೃಷ್ಟಿಸಿದೆ. ಚೇತರಿಸಿಕೊಂಡಿದ್ದ 10 ಮಂದಿಯಲ್ಲಿ ಮತ್ತೆ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ವರದಿ ಪಾಸಿಟಿವ್ ಬಂದಿದೆ.

ಈ ಎಲ್ಲ ರೋಗಿಗಳು ಜೂನ್ ತಿಂಗಳಲ್ಲಿ  ಬನೂರ್‌ನ ಜಿಯಾನ್ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.  ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಅಂತಿಮ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಬಳಿಕವಷ್ಟೇ ಮನೆಗೆ ತೆರಳಲು ಅನುಮತಿ ನೀಡಲಾಗಿತ್ತು. .

ಈ ಬಗ್ಗೆ  ಪ್ರತಿಕ್ರಿಯಿಸಿರು  ಡಾ.ಮಂಜಿತ್ ಸಿಂಗ್  ‘ರೋಗಿಗಳು ಒಮ್ಮೆ ಚೇತರಿಸಿಕೊಂಡ  ಬಳಿಕ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಮತ್ತೆ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಈ ರೋಗಿಗಳಿಗೆ ಏಳು ದಿನಗಳ   ಮನೆ ಕ್ವಾರಂಟೈನ್ ಗೆ  ಸಲಹೆ ನೀಡಲಾಗಿದೆ’ ಎಂದು ಹೇಳಿದ್ದಾರೆ..

ಕೊರೋನಾದಿಂದ ಗುಣಮುಖರಾದ ಬಳಿಕ ಮತ್ತೆ ಕೊರೋನಾ ಕಾಣಿಸಿಕೊಂಡ ಪ್ರಕರಣ ಕೇರಳ ಮತ್ತು ಅರುಣಾಚಲ ಪ್ರದೇಶದಿಂದಲೂ ವರದಿಯಾಗಿತ್ತು.

ಮತ್ತಷ್ಟು ಸುದ್ದಿಗಳು

Latest News

ವೆಬ್ ಸಿರೀಸ್’ಗೆಂದು ಚಿತ್ರೀಕರಣ: ಪೋರ್ನ್ ಸೈಟ್’ನಲ್ಲಿ ರಿಲೀಸ್, ದೂರು ನೀಡಿದ ಮಾಡೆಲ್

newsics.com ಮುಂಬೈ: ಮಾಡೆಲ್ ಒಬ್ಬರನ್ನು ವೆಬ್ ಸಿರೀಸ್ ಎಂದು ನಂಬಿಸಿ ನಿಕಟ ದೃಶ್ಯಗಳನ್ನು ಚಿತ್ರೀಕರಿಸಿ ಪೋರ್ನ್ ಸೈಟಲ್ಲಿ ಬಿಡುಗಡೆ ಮಾಡಿರುವ ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ. 24 ವರ್ಷದ...

ಸಹಕಾರ ಬ್ಯಾಂಕಿಗೆ ವಂಚನೆ: ಇಡಿಯಿಂದ ಮಾಜಿ ಶಾಸಕನ ಬಂಧನ

newsics.com ಮುಂಬೈ: ಸಹಕಾರ ಬ್ಯಾಂಕಿಗೆ 512.54 ಕೋಟಿ ರೂ. ವಂಚಿಸಿ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಶಾಸಕ ವಿವೇಕಾನಂದ ಎಸ್‌. ಪಾಟೀಲ್‌ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ. ರಾಯಘಡ ಜಿಲ್ಲೆಯ...

ರೈಲು ಹತ್ತಲು ಪ್ಲಾಟ್‌ಫಾರ್ಮ್ ಟಿಕೆಟ್ ಅಷ್ಟೇ ಸಾಕು! ರೈಲಲ್ಲೇ ಟಿಕೆಟ್ ಸಿಗತ್ತೆ

newsics.com ನವದೆಹಲಿ: ನಿಮ್ಮ ಬಳಿ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ಇದ್ದರೆ ನೀವು ರೈಲು ಹತ್ತಬಹುದು. ಬಳಿಕ ರೈಲಿನಲ್ಲೇ ಟಿಟಿಇಯಿಂದ ಟಿಕೆಟ್ ಪಡೆಯಬಹುದು. ಹೌದು, ಇಂತಹದೊಂದು ಅವಕಾಶವನ್ನು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಕಲ್ಪಿಸಿದೆ. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದಿದ್ದರೂ,...
- Advertisement -
error: Content is protected !!