Wednesday, October 5, 2022

20 ವರ್ಷ ಪಾಕ್ ಜೈಲಿನಲ್ಲಿ ಕಳೆದ ಬಳಿಕ ಸ್ವಗ್ರಾಮಕ್ಕೆ ಮರಳಿದ ಒಡಿಶಾದ ನಿವಾಸಿ

Follow Us

Newsics.com

ಭುವನೇಶ್ವರ: ಒಂದಲ್ಲ ಎರಡಲ್ಲ 20 ವರ್ಷ ಪಾಕಿಸ್ತಾನದ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬಳಿಕ ಒಡಿಶಾದ ನಿವಾಸಿಯೊಬ್ಬ ಸ್ವ ಗ್ರಾಮಕ್ಕೆ ಹಿಂತಿರುಗಿದ್ದಾನೆ. ಇದು ಅವರ ಎರಡನೆ ಜನ್ಮ ಎಂದೇ ಜನರಾಡಿಕೊಳ್ಳುತ್ತಿದ್ದಾರೆ.  ಬಿರ್ಜು ಕುಲು, 25 ವರ್ಷಗಳ ಹಿಂದೆ ತಮ್ಮ ಸ್ವಗ್ರಾಮ  ಸುಂದರ್ ಘಡ್ ಜಿಲ್ಲೆಯ ಜಂಗಾಟೆಲಿ ಎಂಬ ಗ್ರಾಮದಿಂದ ನಾಪತ್ತೆಯಾಗಿದ್ದರು.

ಮಾನಸಿಕ ಅಸ್ವಸ್ಥತೆಯಿಂದ ಅವರು ಬಳಲುತ್ತಿದ್ದರು. ಹೀಗೆ ಊರಿಂದ ಊರಿಗೆ ಪ್ರಯಾಣ ಬೆಳೆಸಿದ್ದ ಬಿರ್ಜು ಕುಲು, ರಾಜಸ್ತಾನ ಕೂಡ ತಲುಪಿದ್ದರಂತೆ. ಮರು ಭೂಮಿಯಲ್ಲಿ ದಾರಿ ತಪ್ಪಿದ ಅವರು ಕೊನೆಗೆ ತಲುಪಿದ್ದು ಪಾಕಿಸ್ತಾನವನ್ನು.

ಭಾರತದ ಗೂಢಚಾರ ಎಂದು ಭಾವಿಸಿದ್ದ ಪಾಕಿಸ್ತಾನ ಅವರಿಗೆ ಚಿತ್ರಹಿಂಸೆ ಕೂಡ ನೀಡಿತ್ತಂತೆ. ಹೀಗೆ 20 ವರ್ಷ ಪಾಕಿಸ್ತಾನದ ಲಾಹೋರ್ ಸೆರೆಮನೆಯಲ್ಲಿ ಕಳೆದ ಬಿರ್ಜು ಕುಲು ಇದೀಗ ಸ್ವ ಗ್ರಾಮಕ್ಕೆ ಹಿಂತಿರುಗಿದ್ದಾರೆ.

ಇಡಿ ಗ್ರಾಮದ ಜನರು ಅವರನ್ನು ಸಂತೋಷದಿಂದ ಹಾರ್ದಿಕವಾಗಿ ಸ್ವಾಗತಿಸಿದ್ದಾರೆ. 20 ವರ್ಷಗಳಲ್ಲಿ ಅವರ ತಂದೆ ತಾಯಿ ತೀರಿಕೊಂಡಿದ್ದಾರೆ. ಇದೀಗ ಸಹೋದರಿ ಮಾತ್ರ ಬದುಕಿ ಉಳಿದಿದ್ದಾರೆ. ನನ್ನ ಜೀವನದಲ್ಲಿ ತಮ್ಮನನ್ನು ಭೇಟಿ ಮಾಡುವ ಸಾಧ್ಯತೆ ಇಲ್ಲ ಅಂದುಕೊಂಡಿದ್ದೆ. ಇದೀಗ ಅದು ಸುಳ್ಳಾಗಿದೆ. ತಮ್ಮ ಮರಳಿ ಬಂದಿದ್ದಾನೆ ಎಂದು ಸಹೋದರಿ ಆನಂದ ಭಾಷ್ಪ ಸುರಿಸುತ್ತಾ ಸಂತಸ ಹಂಚಿಕೊಂಡಿದ್ದಾರೆ.

ಒಡಿಶಾ ಮತ್ತು ಬುಡಕಟ್ಟ ಭಾಷೆ  ಸದ್ರಿ ಯನ್ನು ಮರೆತಿರುವ ಬಿಜು ಕುರ್ಲು ಕೇವಲ ಹಿಂದಿ ಭಾಷೆ ಯಲ್ಲಿ ಮಾತನಾಡುತ್ತಿದ್ದಾರೆ.  ಗ್ರಾಮಕ್ಕೆ ಮರಳಿ ಬಂದಿರುವ ಬಿರ್ಜು ಕುಲು ಗೆ ಸರ್ಕಾರದ ಎಲ್ಲ ನೆರವು ನೀಡುವುದಾಗಿ ಕಂದಾಯ ಅಧಿಕಾರಿಗಳು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಸೂಕ್ತ ಪಾಠ ಕಲಿಸಿದ್ದೇವೆ: ಮೋದಿ ಘೋಷಣೆ

ಮತ್ತಷ್ಟು ಸುದ್ದಿಗಳು

vertical

Latest News

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...
- Advertisement -
error: Content is protected !!