newsics.com
ನವದೆಹಲಿ: ಪೂರ್ವ ಲಡಾಖ್’ನಲ್ಲಿ ಉದ್ವಿಗ್ನತೆ ತಗ್ಗಿಸುವ ನಿಟ್ಟಿನಲ್ಲಿ ಮುಂಚೂಣಿ ಪ್ರದೇಶಗಳಿಗೆ ಹೆಚ್ಚಿನ ಸೇನಾಪಡೆಗಳನ್ನು ಕಳುಹಿಸದಿರಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ.
14 ಗಂಟೆಗಳ ಕಾಲ ನಡೆದ ಕಾರ್ಪ್ಸ್ ಕಮಾಂಡರ್-ಮಟ್ಟದ ಆರನೇ ಸುತ್ತಿನ ಮಾತುಕತೆಯ ಒಂದು ದಿನದ ನಂತರ ಮಂಗಳವಾರ ಭಾರತೀಯ ಮತ್ತು ಚೀನಾ ಜಂಟಿ ಸೇನಾ ಹೇಳಿಕೆಯಲ್ಲಿ ಈ ಘೋಷಣೆ ಮಾಡಿವೆ.
ಚೀನಾದಿಂದ ಆಮದು ಪ್ರಮಾಣ ಶೇ.27 ಕುಸಿತ
ಮುಂಬರುವ ಭೀಕರ ಚಳಿಗಾಲದ ಹಿನ್ನೆಲೆಯಲ್ಲಿ, ಪೂರ್ವ ಲಡಾಖ್‌ನಲ್ಲಿರುವ ಅತಿ ಎತ್ತರದ ಸಂಘರ್ಷ ಸ್ಥಳಗಳಲ್ಲಿ ನೆಲೆಸಿರುವ ಉದ್ವಿಗ್ನತೆಯನ್ನು ಶಮನಗೊಳಿಸುವ ವಿಧಾನಗಳ ಬಗ್ಗೆ ಮಾತುಕತೆಯಲ್ಲಿ ಹೆಚ್ಚಿನ ಗಮನ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ. ಆದರೆ, ಈ ಸುದೀರ್ಘ ಮಾತುಕತೆಯ ಫಲಿತಾಂಶದ ಬಗ್ಗೆ ತಕ್ಷಣಕ್ಕೆ ಗೊತ್ತಾಗಿಲ್ಲ. ಆದರೆ, ಮಾತುಕತೆಗಳನ್ನು ಮುಂದುವರಿಸಲು ಇನ್ನೊಂದು ಸುತ್ತಿನ ಸಭೆ ನಡೆಸಲು ಉಭಯ ಬಣಗಳು ಒಪ್ಪಿಕೊಂಡಿವೆ ಎಂದು ಹೇಳಲಾಗಿದೆ.
ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆಗೆ ಡ್ರೋನ್ ಬಳಸುತ್ತಿರುವ ಪಾಕ್