newsics.com
ನವದೆಹಲಿ: 2035 ರ ಹೊತ್ತಿಗೆ ವಿಶ್ವದ ಮೊದಲ ಹೈಡ್ರೋಜನ್ ಚಾಲಿತ ವಿಮಾನ ಪರಿಚಯಿಸುವುದು ತನ್ನ ಗುರಿ ಎಂದು ಏರ್ ಬಸ್ ಹೇಳಿಕೊಂಡಿದೆ.
2035ರ ವೇಳೆಗೆ ಮಾಲಿನ್ಯರಹಿತ ವಿಶ್ವದ ಮೊದಲ ವಾಣಿಜ್ಯಾತ್ಮಕ ವಿಮಾನದ ಮೂರು ಪರಿಕಲ್ಪನೆಗಳನ್ನು ವಿಮಾನಯಾನ ದೈತ್ಯ ಕಂಪನಿ ಏರ್ ಬಸ್ ಸೋಮವಾರ ಬಹಿರಂಗಪಡಿಸಿದೆ. ಈ ಎಲ್ಲಾ ಪರಿಕಲ್ಪನೆಗಳು ಜಲಜನಕದಿಂದ ನಡೆಸಲ್ಪಡುತ್ತವೆ. ಇದು ಏರೋಸ್ಪೇಸ್ ಮತ್ತು ಇತರ ಅನೇಕ ಕೈಗಾರಿಕೆಗಳಿಗೆ ಶುದ್ಧ ವಾಯುಯಾನ ಇಂಧನವಾಗಿ ಪರಿಹಾರವಾಗುವ ಸಾಧ್ಯತೆ ಇದೆ ಎಂದು ಯುರೋಪಿಯನ್ ಸಂಸ್ಥೆ ಏರ್ ಬಸ್ ಅಭಿಪ್ರಾಯಪಟ್ಟಿದೆ.
ಇನ್ಮುಂದೆ ವಿದ್ಯುತ್‌ಗೂ ಸಿಗಲಿದೆ ಎಲ್‌ಪಿಜಿ ಮಾದರಿ ಸಬ್ಸಿಡಿ..!
ವಾಣಿಜ್ಯ ವಾಯುಯಾನ ಕ್ಷೇತ್ರಕ್ಕೆ ಐತಿಹಾಸಿಕ ಹಾಗೂ ಈ ಉದ್ಯಮವು ಹಿಂದೆಂದೂ ಕಾಣದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಲು ನಾವು ಉದ್ದೇಶಿಸಿದ್ದೇವೆ ಎಂದು ಏರ್‌ಬಸ್ ಸಿಇಒ ಗುಯಿಲೌಮ್ ಫೌರಿ ಹೇಳಿದ್ದಾರೆ.
ವಿದೇಶಿ ದೇಣಿಗೆ ಪಡೆವ ಎನ್’ಜಿಒಗಳಿಗೆ ಆಧಾರ್ ಕಡ್ಡಾಯ
ಭಾರತದ ವಶವಾದ ಈಶಾನ್ಯ ಲಡಾಖ್’ನ 6 ಗುಡ್ಡ