Tuesday, January 19, 2021

ದೆಹಲಿಗೆ ವಾಯು ರಕ್ಷಣಾ ಕವಚ: ಶೀಘ್ರವೇ ಅಸ್ತಿತ್ವಕ್ಕೆ ಬರುವ ಸಾಧ್ಯತೆ

ನವದೆಹಲಿ: ಶತ್ರು ದೇಶಗಳ ಸಂಭಾವ್ಯ ಕ್ಷಿಪಣಿ ಮತ್ತು ಡ್ರೋಣ್ ದಾಳಿಯಿಂದ ನವದೆಹಲಿ ಮತ್ತು ಅತೀ ಗಣ್ಯ ವ್ಯಕ್ತಿಗಳನ್ನು ರಕ್ಷಿಸುವ ಸಂಬಂಧ ಜಾರಿಗೆ ತರಲಾಗುವ  ವಾಯು ರಕ್ಷಾ ಕವಚ ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಸಂಯುಕ್ತ ವಾಯು ಭದ್ರತಾ ವ್ಯವಸ್ಥೆ ಎಂದು ಇದಕ್ಕೆ ಹೆಸರಿಡಲಾಗಿದೆ. ಇದು ಅತ್ಯಾಧುನಿಕ ಕ್ಷಿಪಣಿ  ನಿರೋಧಕ ವ್ಯವಸ್ಥೆಯಾಗಿದೆ.  ಕ್ರೂಸ್ ಕ್ಷಿಪಣಿ,  ಡ್ರೋಣ್ ಸೇರಿದಂತೆ ಶತ್ರು ರಾಷ್ಟ್ರಗಳ ಕ್ಷಿಪಣಿ ದಾಳಿಯಿಂದ  ದೆಹಲಿ ನಾಗರಿಕರನ್ನು ಇದು ಸಂರಕ್ಷಿಸಲಿದೆ. ಅಮೆರಿಕದೊಂದಿಗೆ ಈ ಸಂಬಂಧ ಅಂತಿಮ ಮಾತುಕತೆ ನಡೆದಿದ್ದು, ಶೀಘ್ರವೇ  ಇದನ್ನು ಅಳವಡಿಸುವ ಸಾಧ್ಯತೆಗಳಿವೆ.  ದೆಹಲಿ ಏರಿಯಾ ರಕ್ಷಣಾ ಯೋಜನೆಯಡಿ ಪ್ರಸಕ್ತ  ರಷ್ಯಾದ ಭದ್ರತಾ ವ್ಯವಸ್ಥೆ ಬದಲಾಗಿ ಈ ನೂತನ ರಕ್ಷಣಾ ಕವಚ ಅಸ್ತಿತ್ವಕ್ಕೆ ಬರಲಿದೆ.

ಮತ್ತಷ್ಟು ಸುದ್ದಿಗಳು

Latest News

ಕಬ್ಬನ್’ಪಾರ್ಕ್’ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಕಾರ್ಯ ಆರಂಭ

newsics.com ಬೆಂಗಳೂರು: ಸುಮಾರು ಒಂದು ವರ್ಷದ ನಂತರ ಕಬ್ಬನ್ ಪಾರ್ಕ್‌ನಲ್ಲಿ ಸ್ಮಾರ್ಟ್ ಸಿಟಿ ಕೆಲಸ ಭಾನುವಾರ (ಜ.17) ಪ್ರಾರಂಭವಾಗಿದೆ. ಸದ್ಯ ಉದ್ಯಾನವನದ ಮೂಲಕ 4 ಕಿ.ಮೀ ನಡಿಗೆ...

ಮಾರ್ಚ್‌ ಮೊದಲ ವಾರ ಬಜೆಟ್- ಸಿಎಂ

newsics.com ಕುಂದಾಪುರ(ಉಡುಪಿ): ಮಾರ್ಚ್‌ ಮೊದಲ ವಾರ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.ಕುಂಭಾಶಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮಂಗಳವಾರ ಗಣಹೋಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಡುಪಿಯ ಧಾರ್ಮಿಕ ಪ್ರವಾಸದಲ್ಲಿ ಸಕಾಲಕ್ಕೆ...

ಸಸ್ಯಾಹಾರಿಗಳಿಗೆ ಕೊರೋನಾ ಸೋಂಕಿನ ಅಪಾಯ ಕಡಿಮೆ-ವರದಿ

newsics.com ನವದೆಹಲಿ: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತನ್ನ ಸುಮಾರು 40 ಸಂಸ್ಥೆಗಳಲ್ಲಿ ನಡೆಸಿದ ಹೊಸ ಸಮೀಕ್ಷೆಯಲ್ಲಿ, ಧೂಮಪಾನಿಗಳು ಮತ್ತು ಸಸ್ಯಾಹಾರಿಗಳಲ್ಲಿ ಕಡಿಮೆ ಸಿರೊಪೊಸಿಟಿವಿಟಿ ಹೊಂದಿರುವುದು ಕಂಡುಬಂದಿದ್ದು, ಅವರು ಕೊರೋನಾವೈರಸ್...
- Advertisement -
error: Content is protected !!