Wednesday, November 30, 2022

ಸೇನೆಗೆ ಸೇರ್ಪಡೆಯಾದ ಭಾರತದ ಮೊದಲ ಪ್ರಚಂಡ ಯುದ್ಧ ಹೆಲಿಕಾಪ್ಟರ್

Follow Us

newsics.com

ಜೈಪುರ: ಸ್ವದೇಶಿ ನಿರ್ಮಿತ ಮೊದಲ ಲಘು ಯುದ್ಧ ಹೆಲಿಕಾಪ್ಟರ್ ಅನ್ನು ಇಂದು ವಾಯುಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್  ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರ ಉಪಸ್ಥಿತಿಯಲ್ಲಿ ಜೋಧಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಚಂಡ್‌  ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ವೈಶಿಷ್ಟತೆ: 5.8 ಟನ್ ತೂಕದ ಅವಳಿ-ಎಂಜಿನ್ LCH ಶಕ್ತಿ ಅನ್ನು ಈ ಹೆಲಿಕಾಪ್ಟರ್ ಹೊಂದಿದ್ದು, ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಫ್ರೆಂಚ್ ಎಂಜಿನ್ ತಯಾರಕ ಸಫ್ರಾನ್ ಸಹಯೋಗದೊಂದಿಗೆ ಅಭಿವೃದ್ಧಿಪಡಲಾಗಿದೆ. ಹೊಸ ತಂತ್ರಜ್ಞಾನದ ಅಗತ್ಯವಿರುವ ಚುರುಕುತನ ಇದರಲ್ಲಿದ್ದು, ಕುಶಲತೆ, ವಿಸ್ತೃತ ಶ್ರೇಣಿ, ಹೆಚ್ಚಿನ ಎತ್ತರದ ಕಾರ್ಯಕ್ಷಮತೆ ಮತ್ತು ಎಲ್ಲಾ ಹವಾಮಾನದಲ್ಲೂ ಯುದ್ಧ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಬಿಸಿ ವಾತಾವರಣದ ಮರುಭೂಮಿಯಲ್ಲಿ ಮತ್ತು ಸಿಯಾಚಿನ್‍ನಂತಹ ಅತಿ ತಣ್ಣನೆಯ ಪ್ರದೇಶದಲ್ಲಿ ಲ್ಯಾಂಡ್ ಮಾಡಬಹುದಾಗಿದ್ದು, ಸಮುದ್ರ ಮಟ್ಟದಿಂದ 5,000 ಮೀಟರ್ ಎತ್ತರ ಪ್ರದೇಶದಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲದು. ಶಸ್ತ್ರ ಸಜ್ಜಿತ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದ್ದು ಇದು ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಬಲ್ಲದು.

ಬೆಂಗಳೂರಿನಲ್ಲಿರುವ ಹೆಚ್‍ಎಎಲ್ ಈ ಲಘು ಯುದ್ಧ ಹೆಲಿಕಾಪ್ಟರ್ ನಿರ್ಮಿಸಿದ್ದು, ಇದು ಭಾರತೀಯ ವಾಯು ಮತ್ತು ಭೂ ಸೇನೆಗೆ ಹೆಚ್ಚು ಬಲ ತಂದು ಕೊಡಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

57 ಲಕ್ಷ ಮಂದಿಗೆ ಆಹಾರ ಬಿಕ್ಕಟ್ಟು- ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!