ಚೆನ್ನೈ: ಅಕ್ಷಯ ಪಾತ್ರಾ ಯೋಜನೆಯ ಬೆಳ್ಳುಳ್ಳಿ, ಈರುಳ್ಳಿರಹಿತ ಸಾತ್ವಿಕ ಆಹಾರ ಪೂರೈಕೆಗೆ ತಮಿಳುನಾಡು ವಿಪಕ್ಷ ವಿರೋಧ ವ್ಯಕ್ತಪಡಿಸಿದೆ. ಗ್ರೇಟರ್ ಚೆನ್ನೈ ಪಾಲಿಕೆಯ ಶಾಲೆಗಳಲ್ಲಿ ಅಕ್ಷಯ ಪಾತ್ರೆ ಯೋಜನೆಯಡಿ ಉಚಿತ ಉಪಹಾರ ಪೂರೈಕೆ ಮಾಡಲಾಗುತ್ತಿದೆ.
ಇದರಿಂದ ಮಕ್ಕಳಿಗೆ ಪೌಷ್ಠಿಕತೆಯ ಕೊರತೆ ಎದುರಾಗಲಿದೆ ಎಂದು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಸದ್ಯ 24 ಶಾಲೆಗಳ 5,785 ಮಕ್ಕಳಿಗೆ ಉಪಹಾರ ಪೂರೈಸಲಾಗುತ್ತಿದೆ.