Friday, January 15, 2021

ಅಡುಗೆ ಮನೆಯ ನಲ್ಲಿಯಲ್ಲಿ ಹರಿದು ಬಂತು ಮದ್ಯ

ತ್ರಿಶ್ಯೂರು: ಇಲ್ಲಿಗೆ ಸಮೀಪದ ಚಾಲಕ್ಕು಼ಡಿಯಲ್ಲಿನ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಉಚಿತ ಮದ್ಯ ಪೂರೈಕೆಯಾಗಿದೆ. ಯಾರೂ ಕೂಡ ಇದಕ್ಕೆ ಮನವಿ ಸಲ್ಲಿಸಿರಲಿಲ್ಲ. ಆದರೂ ಮದ್ಯ ಪೂರೈಸಲಾಗಿದೆ. ಚಾಲಕ್ಕುಡಿಯಲ್ಲಿರುವ ಸೋಲೋಮನ್  ಅವೆನ್ಯೂ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಈ ಉಚಿತ ಕೊಡುಗೆ ದೊರೆತಿದೆ. ಇದರ ಹಿಂದೆ ಸ್ವಾರಸ್ಯಕರ ಕಥೆಯಿದೆ. ಅಬಕಾರಿ ಇಲಾಖೆ ಅಪಾರ ಪ್ರಮಾಣದ ಅಕ್ರಮ ಮದ್ಯ ವಶಪಡಿಸಿಕೊಂಡಿತ್ತು. ಬಳಿಕ ಇದನ್ನು ಸಮೀಪದಲ್ಲಿ ಇರುವ ಹೊಂಡದಲ್ಲಿ ಬಿಸಾಡಿ ನಾಶಪಡಿಸಿತ್ತು. ಅಲ್ಲಿ ಸಂಗ್ರಹವಾದ ಮದ್ಯ ನಿಧಾನವಾಗಿ ಹರಿದು ಹತ್ತಿರದ ಬಾವಿಗೆ ತಲುಪಿದೆ. ಬಳಿಕ ನೀರಿನೊಂದಿಗೆ ಮಿಶ್ರಣವಾಗಿದೆ. ಈ ಬಾವಿಯ ನೀರನ್ನು ಅಪಾರ್ಟ್ ಮೆಂಟ್ ನ 18 ಕುಟುಂಬ ಸೇರಿದಂತೆ ಸಮೀಪದ ಎಲ್ಲರೂ ಕುಡಿಯುವ  ಉದ್ದೇಶಕ್ಕೆ ಬಳಸುತ್ತಿದ್ದರು. ಇದರಿಂದಾಗಿ ನಳ್ಳಿ ನೀರಿನಲ್ಲಿ ಮದ್ಯ ಬೆರೆತ ನೀರು ಎಲ್ಲರ ಮನೆತಲುಪಿದೆ.  ಇದೀಗ ಬಾವಿ ಶುದ್ದೀಕರಿಸಲಾಗಿದ್ದು, ಮತ್ತೆ ಎಲ್ಲರಿಗೂ ಶುದ್ದ ಕುಡಿಯುವ ನೀರಿನ ಪೂರೈಕೆ ಮಾಡಲಾಗಿದೆಯಂತೆ �2 h� X�x�:�

ಮತ್ತಷ್ಟು ಸುದ್ದಿಗಳು

Latest News

ಅಮೆರಿಕದಲ್ಲಿ ಪತ್ನಿ, ಮಗಳನ್ನು ಕೊಂದು ಗುಂಡಿಕ್ಕಿಕೊಂಡ ಭಾರತ ಮೂಲದ ವ್ಯಕ್ತಿ

newsics.com ನ್ಯೂಯಾರ್ಕ್: ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬರು ತನ್ನ ಪತ್ನಿ ಮತ್ತು ಮಗಳನ್ನು ಗುಂಡು ಹಾರಿಸಿ ಕೊಂದು, ಬಳಿಕ ಗುಂಡು ಹಾರಿಸಿಕೊಂಡು...

ರಾಜ್ಯದಲ್ಲಿ 708 ಮಂದಿಗೆ ಕೊರೋನಾ ಸೋಂಕು, ಮೂವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 708 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿದೆ.ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಈ...

ಹಿರಿಯ ಪತ್ರಕರ್ತ ಹನುಮಂತ ಹೂಗಾರ ನಿಧನ

newsics.com ಹುಬ್ಬಳ್ಳಿ: 2020ನೇ ಸಾಲಿನ 'ಜೀವಮಾನ ಸಾಧನೆ' ಪ್ರಶಸ್ತಿ ವಿಜೇತ, ಹಿರಿಯ ಪತ್ರಕರ್ತ ಹನುಮಂತ ಭೀಮಪ್ಪ ಹೂಗಾರ (74)ಇಂದು ಮಧ್ಯಾಹ್ನ ನಿಧನರಾದರು. ಕಳೆದ ನಾಲ್ಕು ದಶಕಗಳಿಂದ ಹೆಚ್ಚು ಕಾಲ ನೇತಾಜಿ, ವಿಶಾಲ ಕರ್ನಾಟಕ, ಪ್ರವರ್ತಕ, ಕುಟುಂಬ...
- Advertisement -
error: Content is protected !!