ಹೈದರಾಬಾದ್: ದೇಶದ ಪ್ರತಿ ನಾಗರಿಕನೂ ಹಿಂದೂ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಭಾರತದ ಎಲ್ಲಾ 130 ಕೋಟಿ ಜನರೂ ಹಿಂದೂಗಳೇ. ಯಾವುದೇ ಭಾಷೆ ಮಾತಾಡಲಿ; ಯಾವುದೇ ದೇವರನ್ನಾದರೂ ನಂಬಲಿ; ಭಾರತದಲ್ಲಿ ಯಾವುದೇ ಮೂಲೆಯಲ್ಲಾದರೂ ನೆಲೆಸಿರಲಿ ಎಲ್ಲರೂ ಹಿಂದುಗಳೇ ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್‍ನಲ್ಲಿ ಗುರುವಾರ ಆರ್ಎಸ್ಎಸ್ ಶಿಬಿರದಲ್ಲಿ ಸ್ವಯಂ ಸೇವಕರನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಭಾರತೀಯರು ಯಾವುದೇ ಧರ್ಮ ಮತ್ತು ಜಾತಿ ಬಗ್ಗೆ ಯೋಚಿಸದೆ ಕೇವಲ ಹಿಂದೂ ಸಮಾಜದ ಭಾಗವಾಗಿದ್ದಾರೆ ಎಂದರು.
ದೇಶದ 130 ಕೋಟಿ ಜನರನ್ನು ಆರ್ಎಸ್ಎಸ್ ಒಂದೇ ದೃಷ್ಟಿಯಲ್ಲಿ ನೋಡುತ್ತದೆ. ಆರ್ಎಸ್ಎಸ್ ಅವರ ಉನ್ನತಿಯನ್ನೇ ಬಯಸುತ್ತದೆ ಎಂದು ಮೋಹನ್ ಭಾಗವತ್ ಪ್ರತಿಪಾದಿಸಿದರು.
ಭಾರತೀಯರೆಲ್ಲ ಹಿಂದೂಗಳೇ- ಮೋಹನ್ ಭಾಗವತ್
Follow Us