newsics.com
ಮುಂಬೈ: ದೇಶದ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇದು ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದಲ್ಲಿ ಅಲ್ಯೂಮಿನಿಯಂ ಬ್ಯಾಟರಿ ಚಾಲಿತ ಕಾರು ಪರಿಚಯಿಸಲು ತಯಾರಿ ನಡೆಸಲಾಗುತ್ತಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸದಸ್ಯರಾಗಿರುವ ಡಾ. ಎಸ್ ಎಸ್ . ವಿ. ರಾಮ ಕುಮಾರ್ ಅವರು ಈ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಅಲ್ಯುಮಿನಿಯಂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಇದರಿಂದ ಕಚ್ಚಾ ವಸ್ತುವಿನ ಕೊರತೆ ಸಂಭವಿಸದು ಎಂದು ಅವರು ಹೇಳಿದ್ದಾರೆ. 2024ರ ಅಂತ್ಯದಲ್ಲಿ ಈ ಕನಸು ಸಾಕಾರಗೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಲ್ಯುಮಿನಿಯಂ ಚಾಲಿತ ಬ್ಯಾಟರಿ ರಿ ಚಾರ್ಜ್ ಮಾಡಲು ವಿದ್ಯುತ್ ಬೇಕಾಗಿಲ್ಲ ಎಂದು ಅವರು ತಿಳಿಸಿದ್ದಾರೆ.