Monday, October 3, 2022

ಕಾಮಾಕ್ಯ ದೇವಿಗೆ 19 ಕೆ.ಜಿ ಚಿನ್ನ ದಾನ ಮಾಡಿದ ಅಂಬಾನಿ

Follow Us

newsics.com
ಗುವಾಹಟಿ: ಅಸ್ಸಾಂನ ಕಾಮಾಕ್ಯ ದೇವಿ ದೇಗುಲ ಗೋಪುರದ ಮೂರು ಕಲಶಗಳ ನಿರ್ಮಾಣಕ್ಕಾಗಿ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ದಂಪತಿ 19 ಕೆ.ಜಿ ಚಿನ್ನ ದಾನ ಮಾಡಿದ್ದಾರೆ.
ಮೂರು ತಿಂಗಳ ಹಿಂದೆ ಕಾಮಾಕ್ಯ ದೇಗುಲಕ್ಕೆ ಚಿನ್ನ ದಾನ ಮಾಡುವುದಾಗಿ ಅಂಬಾನಿ ದಂಪತಿ ವಾಗ್ದಾನ ಮಾಡಿದ್ದರು ಎಂದು ಕಾಮಾಕ್ಯ ದೇಗುಲದ ಮೂಲಗಳು ಹೇಳಿವೆ. ಗೋಪುರದ ಮೂರು ಕಲಶಗಳ ನಿರ್ಮಾಣ ವೆಚ್ಚವನ್ನು ತಾವೇ ಭರಿಸುವುದಾಗಿ ಅಂಬಾನಿ ಹೇಳಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪರವಾಗಿ ಚಿನ್ನ ನೀಡಲಾಗಿದೆ. ಕಲಶಗಳ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಿದ್ದು, ನಿರ್ಮಾಣ ಕಾರ್ಯದಲ್ಲಿ ಶಿಲ್ಪಿಗಳ ಜೊತೆಗೆ ರಿಲೆಯನ್ಸ್ ಎಂಜಿನಿಯರ್‌ಗಳು ಸಹ ಭಾಗಿಯಾಗಿದ್ದಾರೆ.
ಈ ಕಲಶಗಳ ನಿರ್ಮಾಣ ಪೂರ್ಣಗೊಂಡ ನಂತರ ಮುಖೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಕಾಮಾಕ್ಯ ಅಮ್ಮನವರ ದೇಗುಲಕ್ಕೆ ಭೇಟಿ ನೀಡಲಿದ್ದಾರೆ ಎಂದು ಕಾಮಾಕ್ಯ ದೇಗುಲದ ಮೂಲಗಳು ತಿಳಿಸಿವೆ.
ದೇಶದ ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಕ್ಯ ದೇವಾಲಯ ಅಸ್ಸಾಂನ ನೀಲಾಚಲ ಪರ್ವತಗಳಲ್ಲಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಮುಂದಿನ ಏಪ್ರಿಲ್‌-ಮೇನಲ್ಲಿ ಐಪಿಎಲ್‌

ಕೊರೋನಾ ಲಸಿಕೆಗಾಗಿ ಜನಸಾಮಾನ್ಯರು 2022ರವರೆಗೂ ಕಾಯಬೇಕು

ಕೊರೋನಾ ಲಸಿಕೆಗಾಗಿ ಜನಸಾಮಾನ್ಯರು 2022ರವರೆಗೂ ಕಾಯಬೇಕು

ಬಿಹಾರದಲ್ಲಿ ಕಾಂಗ್ರೆಸ್- ಆರ್’ಜೆಡಿ ಸರ್ಕಾರ; ಇಂಡಿಯಾ ಟುಡೇ ಸಮೀಕ್ಷೆ

ನಾಲ್ಕು ಚಕ್ರ ವಾಹನಗಳಿಗೆ ಇನ್ನು ಫಾಸ್ಟ್ ಟ್ಯಾಗ್ ಕಡ್ಡಾಯ

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!