newsics.com
ನವದೆಹಲಿ: ಮಾಹಿತಿ ಮತ್ತು ಪ್ರಸಾರ ಹಾಗೂ ಉನ್ನತ ಶಿಕ್ಷಣ ಮಾಜಿ ಕಾರ್ಯದರ್ಶಿ ಅಮಿತ್ ಖರೆ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರಾಗಿ ನೇಮಿಸಲಾಗಿದೆ.
ಅಮಿತ್ ಖರೆ 1985ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದು, ಎರಡು ವರ್ಷಗಳ ಮಟ್ಟಿಗೆ ಅವರನ್ನು ಸಲಹೆಗಾರರಾಗಿ ನೇಮಕ ಮಾಡಲಾಗಿದೆ.
ಬಿಹಾರ-ಜಾರ್ಖಂಡ್ ಕೇಡರ್ ನ ಐಎಎಸ್ ಅಧಿಕಾರಿಯಾಗಿರುವ ಖರೆ ಅವರು 2019ರ ಡಿಸೆಂಬರ್ನಲ್ಲಿ ಶಿಕ್ಷಣ ಸಚಿವಾಲಯದ (ಉನ್ನತ ಶಿಕ್ಷಣ ಇಲಾಖೆ) ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಅತ್ಯಂತ ಸಮರ್ಥ ವೃತ್ತಿಪರ ಅಧಿಕಾರಿಯಾಗಿರುವ ಅಮಿತ್ ಖರೆ ಅವರು ಪ್ರಧಾನಿ ಮೋದಿ ಅವರ ನಿರ್ದೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕರಡು ರೂಪಿಸಿದ್ದರು. ಅವರ ನೇಮಕಾತಿಯ ಸ್ವಲ್ಪ ಸಮಯದೊಳಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಕ್ಯಾಬಿನೆಟ್ ಅನುಮೋದಿಸಿತ್ತು.
ಡಿಜಿಟಲ್ ಮಾಧ್ಯಮ ನಿಯಮಗಳಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಪ್ರಮುಖ ಬದಲಾವಣೆಗಳನ್ನು ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.