ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಪ್ರಧಾನಿ ಮೋದಿ ಸೇರಿ ಹಲವು ಸಚಿವರು, ಅಧಿಕಾರಿಗಳಿಗೆ ಕೊರೋನಾ ಆತಂಕ ಆರಂಭವಾಗಿದೆ.
ಅಮಿತ್ ಷಾ ಅವರು ನಾಲ್ಕು ದಿನಗಳ ಹಿಂದಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದಿದ್ದ ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದರು. ಇದೀಗ ಅಮಿತ್ ಷಾ ಅವರಿಗೆ ಕೊರೊನಾ ತಗುಲಿದ್ದರಿಂದ ಸಹಜವಾಗಿಯೇ ಅಂದಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಹಾಗೂ ಉಳಿದ ಸಚಿವರಿಗೆ ಕೊರೋನಾ ಆತಂಕ ಶುರುವಾಗಿದೆ.
ಕೊರೋನಾ ಸೋಂಕು ತಗುಲಿರುವ ಬಗ್ಗೆ ಟ್ವಿಟ್ಟರ್’ನಲ್ಲಿ ಹೇಳಿಕೊಂಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ನನಗೂ ಕೊರೋನಾ ಪಾಸಿಟಿವ್ ಇವೆ ಎಂಬುದು ತಪಾಸಣಾ ವರದಿಯಿಂದ ದೃಢಪಟ್ಟಿದೆ. ನನ್ನ ಸಂಪರ್ಕದಲ್ಲಿದ್ದವರು ಕೊರೋನಾ ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡಿದ್ದಾರೆ.
ಅಮಿತ್ ಶಾಗೆ ಕೊರೋನಾ; ಪ್ರಧಾನಿ ಮೋದಿ ಸೇರಿ ಹಲವು ಸಚಿವ, ಅಧಿಕಾರಿಗಳಿಗೆ ಆತಂಕ
Follow Us