newsics.com
ಅಮೆರಿಕ: ಮನೆಯಲ್ಲಿ ಸಾಕಿದ್ದ ಮೊಸಳೆಯೊಂದಿಗೆ ಬೇಸ್‌ಬಾಲ್ ಮ್ಯಾಚ್ ನೋಡಲು ಸ್ಟೇಡಿಯಂ ಬಂದ ಪ್ರಾಣಿ ಪ್ರೇಮಿಯೊಬ್ಬನನ್ನು ಕಂಡು ಭದ್ರತಾ ಸಿಬ್ಬಂದಿ ದಂಗಾಗಿ ಪ್ರವೇಶ ನಿರಾಕರಿಸಿರುವ ಪ್ರಸಂಗ ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ನಡೆದಿದೆ
ಜೋಯ್ ಹೆನ್ನಿ ಎಂಬುವವರೇ ಮೊಸಳೆಯೊಂದಿಗೆ ಸ್ಟೇಡಿಯೋಗೆ ಬಂದ ಬೇಸ್ ಬಾಲ್ ಪ್ರೇಮಿ. ಈತ ಮೊಸಳೆಯನ್ನು ಕರೆದುಕೊಂಡು ಸಿಟಿಜನ್ ಬ್ಯಾಂಕ್ ಪಾರ್ಕ್ ಬಳಿಗೆ ನಡೆದುಕೊಂಡು ಬಂದಿದ್ದಾನೆ. ಮೊಸಳೆಯೊಂದಿಗೆ ಬಂದ ಈತನನ್ನು ನೋಡಿ ಅನೆಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸ್ಟೇಡಿಯಂ ಹೊರಗೆ ಭದ್ರತಾ ಸಿಬ್ಬಂದಿ ಜೊತೆ ಮೊಸಳೆಯನ್ನು ಕರೆತಂದ ಹೆನ್ನಿ ಪ್ರವೇಶಕ್ಕಾಗಿ ಮನವಿ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಪಿಎಸ್ ಮ್ಯಾಪ್ ಎಡವಟ್ಟು: ಕಾರು ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರ ಸಾವು