Saturday, November 26, 2022

ಬೇಬಿ ಫುಡ್ ತಯಾರಿಕೆ ಉದ್ಯಮದಲ್ಲಿ ಯಶಸ್ಸು ಕಂಡ ಜ್ಯೋತಿಶ್ರೀ

Follow Us

newsics.com
ಆಂಧ್ರಪ್ರದೇಶ: ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಆಂಧ್ರಪ್ರದೇಶದ ಜ್ಯೋತಿಶ್ರೀ ಪಪ್ಪು ಎನ್ನುವ ಮಹಿಳೆ ಆರೋಗ್ಯಕರ ಬೇಬಿ ಪುಡ್ ತಯಾರಿಸಿ ಮಾರುತ್ತಿದ್ದಾರೆ.
ಜ್ಯೋತಿ ತಮ್ಮ ಉದ್ಯಮಕ್ಕೆ ನ್ಯೂಟ್ರೀಟ್ ಎಂದು ಹೆಸರಿಟ್ಟಿದ್ದು, ಪ್ರತೀ ತಿಂಗಳಿಗೆ 1.5 ಲಕ್ಷ ರೂ. ವರೆಗೆ ಹಣ ಗಳಿಸುತ್ತಾರೆ.
ಮೊಳಕೆಯೊಡೆದ ರಾಗಿ, ಒಣ ಹಣ್ಣುಗಳು ಮತ್ತು ಕೆಂಪು ಅಕ್ಕಿಯಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರುತ್ತಾರೆ. ಬೇಬಿ ಗಂಜಿ, ಚೋಕೊ ರಾಗಿ ಪ್ಯಾನ್‌ಕೇಕ್ ಮಿಕ್ಸ್, ಪ್ರೀಮಿಕ್ಸ್ ಪಾನೀಯಗಳ ಪೌಡರ್ ಸೇರಿದಂತೆ ವಿವಿಧ ಪದಾರ್ಥ ತಯಾರಿಸುತ್ತಾರೆ.
ಜ್ಯೋತಿ ಸುಮಾರು 100 ನೈಸರ್ಗಿಕ ಉತ್ಪನ್ನಗಳಿಂದ 7000 ಬಗೆಯ ತಿನಿಸುಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ.
2017ರಲ್ಲಿ ಉದ್ಯಮ ಆರಂಭಿಸಿದ ಆರು ತಿಂಗಳಲ್ಲಿ 5 ಸಾವಿರಕ್ಕೂ ಅಧಿಕ ಗ್ರಾಹಕರನ್ನು ಸೆಳೆಯುವಲ್ಲಿ ಜ್ಯೋತಿ ಯಶಸ್ವಿಯಾಗಿದ್ದರು. ಸದ್ಯ 12,000 ಹೆಚ್ಚು ಗ್ರಾಹಕರಿಗೆ ಜ್ಯೋತಿ ಪೌಷ್ಟಿಕ ಬೇಬಿ ಪುಡ್ ತಯಾರಿಸಿ ಮಾರುತ್ತಿದ್ದಾರೆ.
ತಮ್ಮೊಂದಿಗೆ ಜ್ಯೋತಿ ಇನ್ನು ಇಬ್ಬರಿಗೆ ಉದ್ಯೋಗ ನೀಡಿದ್ದಾರೆ.
ಅಮೇಜಾನ್, ಪ್ಲಿಪ್’ಕಾರ್ಟ್ ನಂತಹ ಆನ್ಲೈನ್ ಮಾರುಕಟ್ಟೆಯಲ್ಲೂ ಜ್ಯೋತಿ ಅವರ ಉತ್ಪನ್ನಗಳು ದೊರೆಯಲಿವೆ ಎಂದು ಹೇಳಲಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕೃ ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು...

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...

ನಟಿ ರಿಚಾ ಚಡ್ಡಾಗೆ ಬೆಂಬಲ ಸೂಚಿಸಿದ ಸ್ವರ ಭಾಸ್ಕರ್

newsics.com ಮುಂಬೈ: ದೇಶದ ಸೇನೆಯನ್ನು ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ನಟಿ ರಿಚಾ ಚಡ್ಡಾಗೆ  ನಟಿ ಸ್ವರ ಭಾಸ್ಕರ್ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಿಚಾ...
- Advertisement -
error: Content is protected !!