Tuesday, October 27, 2020

ಆಂಧ್ರ ಪ್ರದೇಶದಲ್ಲಿ ಮದ್ಯದ ದರ ಶೇಕಡ 50 ಹೆಚ್ಚಳ

ವಿಜಯವಾ಼ಡ:  ಆಂಧ್ರಪ್ರದೇಶ ಸರ್ಕಾರ ಮದ್ಯದ ದರವನ್ನು ಶೇಕ಼ಡ 50ರಷ್ಟು ಹೆಚ್ಚಳ ಮಾಡಿದೆ. ಇಂದು ಮಧ್ಯಾಹ್ನದಿಂದಲೇ ಇದು ಜಾರಿಗೆ ಬಂದಿದೆ. ಇದಕ್ಕೂ ಮೊದಲು ರಾಜ್ಯ ಸರ್ಕಾರ ಮದ್ಯದ ದರದಲ್ಲಿ ಶೇಕಡ 25ರಷ್ಟು ಹೆಚ್ಚಳ ಮಾಡಿತ್ತು. ಇದರಿಂದಾಗಿ  ರಾಜ್ಯದಲ್ಲಿ ಶೇಕಡ 75ರಷ್ಟು ಹೆಚ್ಚಳವಾಗಿದೆ. ಮದ್ಯಪಾನ ಮಾಡುವುದರಿಂದ ಜನರನ್ನು ನಿರುತ್ಸಾಹಗೊಳಿಸಲು ಈ ಕ್ರಮ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. 40 ದಿನಗಳ ಲಾಕ್ ಡಾನ್ ನಿಷೇಧದ ನಂತರ ಸೋಮವಾರ ಆಂಧ್ರಪ್ರದೇಶದಲ್ಲಿ  ಮದ್ಯದ ಅಂಗಡಿಗಳನ್ನು ತೆರೆಯಲಾಗಿತ್ತು. ಮೊದಲ ದಿನವೇ ರಾಜ್ಯದಲ್ಲಿ ಭರ್ಜರಿ ವ್ಯಾಪಾರ ಕೂಡ ನಡೆದಿತ್ತು. ಚಿತ್ತೂರ್ ನಲ್ಲಿ ಮದ್ಯಪಾನ ಮಾಡಿದ ಪತಿಯ ಕಿರುಕುಳ ತಾಳಲಾರದೆ ಪತ್ನಿ ಮತ್ತು ಪುತ್ರಿ ಆತ್ಮಹತ್ಯೆಗೆ ಕೂಡ ಶರಣಾಗಿದ್ದರು

ಮತ್ತಷ್ಟು ಸುದ್ದಿಗಳು

Latest News

ಗುಣಲಕ್ಷಣಗಳಿಲ್ಲದ ಕೊರೋನಾ ಸೋಂಕಿತರೇ ಎಚ್ಚರ!

newsics.comಲಂಡನ್: ಯಾವುದೇ ಗುಣಲಕ್ಷಣಗಳನ್ನು ಹೊಂದಿರದ ಕೊರೋನ ಸೋಂಕಿತ ರೋಗಿಗಳು ಕೊರೋನಾ ವಿರೋಧಿ ಪ್ರತಿಕಾಯಗಳನ್ನು ಬೇಗ ಕಳೆದುಕೊಳ್ಳುತ್ತಾರೆ ಎಂದು ಬ್ರಿಟನ್ ಅಧ್ಯಯನ ಹೇಳಿದೆ.ಆದರೆ, ಗುಣಲಕ್ಷಣಗಳನ್ನು...

ಡೆಲ್ಲಿ ವಿರುದ್ಧ ಗೆದ್ದ ಹೈದರಾಬಾದ್

newsics.comದುಬೈ: ಇಂದು (ಆ.27) ನಡೆದ ಐಪಿಎಲ್‌ ಪಂದ್ಯದಲ್ಲಿ ಹೈದರಾಬಾದ್‌ ತಂಡದ ಎದುರು ಡೆಲ್ಲಿ ಸೋತು ಶರಣಾಯಿತು. ಡೇವಿಡ್ ವಾರ್ನರ್ ಬಳಗ 88 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿತು. ವೃದ್ಧಿಮಾನ್‌...

ಬೈಕ್‌’ ಮೇಲೆ ಹರಿದ ಲಾರಿ; ನವ ದಂಪತಿ ಸಾವು

newsics.comಮಂಗಳೂರು: ಬೈಕ್‌ ಮತ್ತು ಲಾರಿ ನಡುವಿನ ಅಪಘಾತದಲ್ಲಿ ನವ ದಂಪತಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ತೊಕ್ಕೊಟ್ಟು ಓವರ್ ಬ್ರಿಡ್ಜ್‌ ಸಮೀಪ ಮಂಗಳವಾರ ಸಂಜೆ ಈ ಅಪಘಾತ ನಡೆದಿದೆ. ಬೈಕ್‌ನಲ್ಲಿದ್ದ...
- Advertisement -
- Advertisement -
error: Content is protected !!