newsics.com
ಬಿಹಾರ ರಾಜ್ಯಸಭೆಗೆ ಉಡುಪಿ ತಾಲೂಕಿನ ಸಳ್ವಾಡಿ ಮೂಲದ ಅನಿಲ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಡಾ. ಮಹೇಂದ್ರ ಪ್ರಸಾದ್ ನಿಧನದ ಬಳಿಕ ತೆರವಾಗಿದ್ದ ಈ ಸ್ಥಾನಕ್ಕೆ ಅನಿಲ್ ಹೆಗ್ಡೆ ಹೆಸರನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ನಾಮ ನಿರ್ದೇಶನ ಮಾಡಿದ್ದರು.
ಜಾರ್ಜ್ ಫರ್ನಾಂಡಿಸ್ ಅನುಯಾಯಿಯೂ ಆಗಿದ್ದ ಅನಿಲ್ ಹೆಗ್ಡೆ ಜೆಡಿಯು ಪಕ್ಷದ ತಳಮಟ್ಟದ ನಾಯಕರಾಗಿದ್ದಾರೆ. ಜೆಡಿಯು ಹಾಗೂ ಚುನಾವಣಾ ಆಯೋಗ ನಡುವೆ ಸಂಯೋಜಕರಾಗಿದ್ದ ಇವರನ್ನು ಇದೀಗ ರಾಜ್ಯ ಸಭೆಗೆ ಆರಿಸಿ ಕಳುಹಿಸಲಾಗಿದೆ.
ವಿದ್ಯಾರ್ಥಿಯಿಂದ ಗುಂಡಿನ ದಾಳಿ: 18 ಶಾಲಾ ಮಕ್ಕಳು, ಓರ್ವ ಶಿಕ್ಷಕ ಸೇರಿ 21 ಮಂದಿ ಸಾವು, ಬಂದೂಕುಧಾರಿಯ ಹತ್ಯೆ