newsics.com
ಕಮ್ಮಮ್ (ತೆಲಂಗಾಣ): ಕಳೆದ ವರ್ಷ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಸೋನು ಸೂದ್ ಗಾಗಿ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಇದೀಗ ತೆಲಂಗಾಣದ ಕಮ್ಮಮ್ ಜಿಲ್ಲೆಯಲ್ಲಿ ಸೋನು ಸೂದ್ ಗಾಗಿ ಇನ್ನೊಂದು ದೇವಾಲಯ ನಿರ್ಮಾಣ ಮಾಡಲಾಗಿದೆ.
ಕೋವಿಡ್ ಶುರುವಾದಾಗಿನಿಂದ ನಟ ಸೋನು ಸೂದ್ ದಿನಗೂಲಿ ಕಾರ್ಮಿಕರಿಗೆ ಹಾಗೂ ಸಂಕಷ್ಟದಲ್ಲಿ ಇರುವವರಿಗಾಗಿ ಹಲವಾರು ಸಹಾಯ ಮಾಡಿದ್ದಾರೆ.
ಅಭಿಮಾನಿಗಳು ವಿವಿಧ ರೀತಿಯಲ್ಲಿ ಸೋನು ಸೂದ್ ಗೆ ಗೌರವ ಸಲ್ಲಿಸುತ್ತಿದ್ದು, ಇದೀಗ ಮತ್ತೊಂದು ದೇವಾಲಯ ನಿರ್ಮಾಣವಾಗಿದೆ. ಕಮ್ಮಮ್ ಜಿಲ್ಲೆಯ ವೆಂಕಟೇಶ್ ಎಂಬವರು ತಮ್ಮ ಕುಟುಂಬಸ್ಥರ ಸಹಾಯದಿಂದ ಸೋನು ಸೂದ್ ಗಾಗಿ ಈ ದೇವಾಲಯ ನಿರ್ಮಿಸಿದ್ದಾರೆ.