newsics.com
ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ 57ಕೆಜಿ ವಿಭಾಗದ ಕುಸ್ತಿಯಲ್ಲಿ ಭಾರತದ ಕುಸ್ತಿ ಪಟು ಅಂಶು ಮಲಿಕ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಮಹಿಳೆಯರ 57 ಕೆಜಿ ವಿಭಾಗದ ಕುಸ್ತಿ ಫೈನಲ್ನಲ್ಲಿ ಅಂಶು ಮಲಿಕ್ ವಿರುದ್ಧ ನೈಜೀರಿಯಾದ ಒಡುನಾಯೊ ಫೋಲಸಾಡೆ 4-6 ಅಂತರದಲ್ಲಿ ಗೆದ್ದು ಚಿನ್ನದ ಪದಕ ಪಡೆದರು. ಇತ್ತ ಬೆಳ್ಳಿ ಪದಕ ವಿಜೇತೆ ಅಂಶು ಮಲಿಕ್ ಕುಸ್ತಿಯಲ್ಲಿ ಪದಕದ ಬೇಟೆಗೆ ಆರಂಭ ನೀಡಿದ್ದಾರೆ.
2021ರಲ್ಲಿ ಅನ್ಶು ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 20 ವರ್ಷದ ಅನ್ಶು ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಮೂರು ಬಾರಿ ಪದಕ ಗೆದ್ದಿದ್ದಾರೆ.
ಈ ಮೂಲಕ ಭಾರತ ತಂಡ ಈವರೆಗೆ 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ 6 ಚಿನ್ನ, 8 ಬೆಳ್ಳಿ, 7 ಕಂಚು ಸೇರಿ ಒಟ್ಟು 21 ಪದಕ ಗೆದ್ದಂತಾಗಿದೆ.
ಭಾರತಕ್ಕೆ ಮತ್ತೊಂದು ಪದಕದ ಭರವಸೆ : ಸೆಮಿಫೈನಲ್ ಪ್ರವೇಶಿಸಿದ ಸಾಕ್ಷಿ ಮಲಿಕ್