ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ, ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಬಿಪಿನ್ ರಾವತ್
ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಕಿಡಿಕಾರಿದ್ದಾರೆ.
ನಾಯಕನಾದವನು ಸರಿಯಾದ ದಾರಿಯಲ್ಲಿ ಮುಂದೆ ಹೋದರೆ ಅವನನ್ನು ಎಲ್ಲರೂ ಹಿಂಬಾಲಿಸುತ್ತಾರೆ. ಇದು ಸರಳವಾಗಿ ಕಂಡರೂ ಸಂಕೀರ್ಣವಾದ ಜವಾಬ್ದಾರಿ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.
ರಾವತ್ ಅವರ ಈ ಹೇಳಿಕೆಗೆ ಪ್ರತಿಪಕ್ಷದ ಕೆಲವು ನಾಯಕರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನ ಶಮಾ ಮೊಹಮ್ಮದ್, ಒಬ್ಬ ಆರ್ಮಿ ಮುಖ್ಯಸ್ಥನ ಬಾಯಲ್ಲಿ ಇಂತಹ ರಾಜಕೀಯ ಹೇಳಿಕೆಗಳು ಬರಬಾರದು ಎಂದು ಹೇಳಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ರಾವತ್ ವಿರುದ್ಧ ಕಿಡಿಕಾರಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆ; ಸೇನಾ ಮುಖ್ಯಸ್ಥ ರಾವತ್ ಕಿಡಿ
Follow Us