ಭೋಪಾಲ್: ವ್ಯಕ್ತಿಯೊಬ್ಬ ಖಾಸಗಿ ಹೆಲಿಕಾಪ್ಟರ್‌ಗೆ ಕಲ್ಲೆಸೆದು ಜಖಂಗೊಳಿಸಿ, ಹಾರಾಟಕ್ಕೆ ಸಿದ್ಧವಾಗಿದ್ದ ವಿಮಾನದ ಎದುರು ಮಲಗಿ ಆತಂಕ ಸೃಷ್ಟಿಸಿದ ಘಟನೆ ಇಲ್ಲಿನ ರಾಜಭೋಜ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಿಐಎಸ್‌ಎಫ್ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇಪ್ಪತ್ತು ವರ್ಷದ ಈತ ಮಾನಸಿಕ ಅಸ್ವಸ್ಥ ಎನ್ನಲಾಗಿದೆ.
ಈ ಘಟನೆಯಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಭದ್ರತಾ ತಪಾಸಣೆ ಬಳಿಕ ಮತ್ತೆ ಪ್ರಯಾಣಿಕರನ್ನು ಹತ್ತಲು ಸೂಚಿಸಲಾಯಿತು ಎಂದು ಸಿಐಎಸ್‌ಎಫ್ ಅಧಿಕಾರಿ ಹೇಳಿದ್ದಾರೆ.
ಹೆಲಿಕಾಪ್ಟರ್‌ಗೆ ಕಲ್ಲೆಸೆತ, ಭೋಪಾಲ್ ಏರ್ಪೋರ್ಟ್ ನಲ್ಲಿ ಆತಂಕ
Follow Us