ನವದೆಹಲಿ: ನಿಮ್ಮ ಕೊನೆಯ ಆಸೆ ಇದ್ದರೆ ತಿಳಿಸಿ. ಅದನ್ನು ಈಡೇರಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಹೀಗಂತಾ ತಿಹಾರ್ ಜೈಲು ಅಧಿಕಾರಿಗಳು ನಿರ್ಭಯಾ ಪ್ರಕರಣದ ನಾಲ್ಕು ಅಪರಾಧಿಗಳಿಗೆ ಸೂಚಿಸಿದ್ದಾರೆ. ಆದರೆ, ಆಪರಾಧಿಗಳು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೊನೆಯ ಬಾರಿ ಯಾರನ್ನಾದರೂ ಭೇಟಿ ಮಾಡುವ ಇಚ್ಚೆ ಕೂಡ ಅವರು ವ್ಯಕ್ತಪಡಿಸಿಲ್ಲ ಎಂದು ವರದಿಯಾಗಿದೆ. ಫೆಬ್ರವರಿ 1ರಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.