Sunday, May 29, 2022

ಮೇಕೆದಾಟು ಯೋಜನೆಗೆ ಅನುಮತಿ ನೀಡದಿರಲು ಪ್ರಧಾನಿಗೆ ತಮಿಳ್ನಾಡು ಮನವಿ

Follow Us

newsics.com
ಚೆನ್ನೈ: ರಾಜ್ಯದ ರೈತರ ಹಿತಾಸಕ್ತಿಗೆ ಧಕ್ಕೆ ತರುವ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕರ್ನಾಟಕಕ್ಕೆ ಒಪ್ಪಿಗೆ ನೀಡಬಾರದೆಂದು ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ನಿಯೋಗ ಪ್ರಧಾನಿಗೆ ಮನವಿ ಮಾಡಿದೆ.
ಕಾವೇರಿ ನದಿಗೆ ಮೇಕೆದಾಟು ಬಳಿ ಕರ್ನಾಟಕ ನಿರ್ಮಿಸಲು ಮುಂದಾಗಿರುವ ಜಲಾಶಯಕ್ಕೆ ಅನುಮತಿ ನೀಡಬಾರದೆಂದು ಡಿಎಂಕೆ ಒತ್ತಾಯಿಸಿದೆ.

ಅಕ್ಟೋಬರ್ 17ರಂದು ಕಾವೇರಿ ತೀಥೋ೯ದ್ಭವ

ಇತ್ತೀಚೆಗೆ ಪ್ರಧಾನಿ ‌ಮೋದಿ ಭೇಟಿ ಮಾಡಿದ್ದ ಕರ್ನಾಟಕ ಸಿಎಂ ಬಿಎಸ್ವೈ ಮೇಕೆದಾಟು ಯೋಜನೆಗೆ ಅನುಮತಿ ಕೋರಿದ್ದರು.
ಇದು ತಿಳಿಯುತ್ತಿದ್ದಂತೆ ತಮಿಳುನಾಡಿದ ಡಿಎಂಕೆ ಮುಖಂಡರಾದ ಟಿ.ಆರ್.ಬಾಲು, ದಯಾನಿಧಿ ಮಾರನ್, ಕನಿಮೊಳಿ ಅವರನ್ನು ಒಳಗೊಂಡ ತಂಡ ಪ್ರಧಾನಿಯವರನ್ನು ಭೇಟಿ ಮಾಡಿದ್ದು, ಈ ಯೋಜನೆಯಿಂದ ತಮಿಳುನಾಡಿನ ಜನರಿಗೆ ಹಾಗೂ ರೈತರಿಗೆ ಅನ್ಯಾಯವಾಗಲಿದೆ ಎಂದು ವಿವರಿಸಿದೆ.
ಅಲ್ಲದೇ ಮೇಕೆದಾಟು ಯೋಜನೆ ವಿರುದ್ಧ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಬರೆದ ಪತ್ರವನ್ನು ಪ್ರಧಾನಿಗೆ ಸಲ್ಲಿಸಿದೆ.
ಪ್ರಧಾನಿ ಮೋದಿ ಭೇಟಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಎಂಕೆ ಮುಖಂಡ ಟಿ.ಆರ್‌.ಬಾಲು, ಪ್ರಧಾನಿ ತಮಿಳುನಾಡಿನ ರೈತರ ಹಿತಾಸಕ್ತಿಗೆ ಧಕ್ಕೆ ತರುವ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದರು.

ಆರೋಗ್ಯ ಇಲಾಖೆ ದಿನಗೂಲಿ ನೌಕರರ ಕನಿಷ್ಠ ವೇತನ ಹೆಚ್ಚಳ

ಕೃಷಿ ಹೊಂಡಕ್ಕೆ ಬಿದ್ದು 3 ಮಕ್ಕಳು ಜಲಸಮಾಧಿ

ಅಗತ್ಯ ವಸ್ತು ಪಟ್ಟಿಯಿಂದ ಈರುಳ್ಳಿ, ಆಲೂ, ಖಾದ್ಯ ತೈಲ, ದ್ವಿದಳ ಧಾನ್ಯ ಹೊರಕ್ಕೆ

ಸೆ.25ರಂದು ಕರ್ನಾಟಕ ಬಂದ್ ಇಲ್ಲ, ಬದಲಿಗೆ ಹೆದ್ದಾರಿ ಬಂದ್
https://newsics.com/news/karnataka/on-september-25-there-was-no-karnataka-bandh-but-a-highway-band/32784/

ಮತ್ತಷ್ಟು ಸುದ್ದಿಗಳು

Latest News

ತನ್ನ ಆಯಸ್ಸಿನ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದೆ ಈ ಶ್ವಾನ!

newsics.com ಶ್ವಾನಗಳು ಅಬ್ಬಬ್ಬಾ ಅಂದ್ರೆ 8- 10 ವರ್ಷ ಬದುಕುತ್ತದೆ. ಕೆಲವೊಂದು ನಾಯಿಗಳು 15 ವರ್ಷಗಳ ಕಾಲ ಬದುಕಿದ ಇತಿಹಾಸ ಕೂಡ ಇದೆ. ಆದರೆ ಪೆಬ್ಲಸ್ ಹೆಸರಿನ ಟಾಯ್...

ಮಹಾರಾಷ್ಟ್ರದ ನಾಲ್ವರಲ್ಲಿ ಒಮೈಕ್ರಾನ್ ಉಪತಳಿ ಪತ್ತೆ 

newsics.com ಮಹಾರಾಷ್ಟ್ರ: ಒಮೈಕ್ರಾನ್ ಉಪತಳಿ BA 4 ಮತ್ತು BA 5 ಸೋಂಕು ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ನಾಲ್ವರಲ್ಲಿ ಪತ್ತೆಯಾಗಿದೆ.ಸೋಂಕಿತರೆಲ್ಲರೂ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಣೆಯಿಂದ ಬಂದಿದ್ದ ಏಳು ರೋಗಿಗಳಲ್ಲಿ ಒಮೈಕ್ರಾನ್ ಉಪತಳಿಗಳ ಸೋಂಕು...

ಥಾಣೆ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ದುರಂತ

newsics.com ಥಾಣೆ: ವೈಜ್ಞಾನಿಕ ಉಪಕರಣಗಳನ್ನು ತಯಾರಿಸುವ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದೆ. ಶನಿವಾರ ತಡರಾತ್ರಿ ಈ ಅವಘಡ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಜೋಡಿಸಿರುವ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಇತರೆಡೆಗೂ ವ್ಯಾಪಿಸಿದ್ದು, ನಂತರ ಬೆಂಕಿ ನಂದಿಸುವ...
- Advertisement -
error: Content is protected !!