Tuesday, April 13, 2021

ಮನೆಯಂಗಳದ ಕ್ರಿಕೆಟ್’ನಿಂದ ವಿಶ್ವದೆಲ್ಲೆಡೆ ಹರಡಿತು ಜ್ಯೋತಿ…

ಸೋಷಿಯಲ್ ಮೀಡಿಯಾ ಯುಗದಲ್ಲಿ ಯಾರು ಯಾವಾಗ ಹೇಗೆ ಪ್ರಸಿದ್ಧಿಗೆ ಬರುತ್ತಾರೆಂದು ಊಹಿಸುವುದೇ ಕಷ್ಟ. ಅದೃಷ್ಟ ಯಾವಾಗ ಹೇಗೆ ಬೇಕಾದರೂ ಖುಲಾಯಿಸಬಹುದು. ಈಗ ಅಂತಹುದೇ ಸುವರ್ಣ ಘಳಿಗೆಯಲ್ಲಿ ಪ್ರಸಿದ್ಧಿಗೆ ಬಂದಿದ್ದಾಳೆ ಉಡುಪಿಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಯುವತಿ ಜ್ಯೋತಿ ಪೂಜಾರಿ.
ಮುಂಬೈನಲ್ಲಿ ವಾಸ ಮಾಡುವ ಜ್ಯೋತಿ ಕೊರೋನಾ ಲಾಕ್ ಡೌನ್’ನಿಂದಾಗಿ ಊರಿಗೆ ಬಂದಿದ್ದಾರೆ. ಹೀಗೆ ಬಂದ ಜ್ಯೋತಿ ತಮ್ಮ ಫ್ರೀ ಟೈಂನಲ್ಲಿ ಮನೆಯಂಗಳದಲ್ಲಿ ಕ್ರಿಕೆಟ್ ಆಡ್ತಿದ್ದಾರೆ. ಈ ವೇಳೆ ಜ್ಯೋತಿ ಹೊಡೆದ ಕವರ್ ಡ್ರೈವ್ ಶಾಟ್’ನ್ನು ರಂಜಿತ್ ಪೂಜಾರಿ ರೆಕಾರ್ಡ್ ಮಾಡಿ ತಮ್ಮ ಫೇಸ್ ಬುಕ್ ಖಾತೆಗೆ ಅಪ್ ಮಾಡಿದ್ದಾರೆ. ಈ ಶಾಟ್ ಇದೀಗ ಜ್ಯೋತಿಗೆ ಅಂತಾರಾಷ್ಟ್ರೀಯ ಮಟ್ಟದ ಐಡೆಂಟಿಟಿ ತಂದುಕೊಟ್ಟಿದೆ.
ಈ ಕ್ರಿಕೆಟ್ ದೃಶ್ಯವನ್ನು ಗಮನಿಸಿದ ESPNcricinfo ತನ್ನ ಟ್ವೀಟ್’ನಲ್ಲಿ ಈ ಬಗ್ಗೆ ಉಲ್ಲೇಖಿಸಿ ಪೋಸ್ಟ್ ಮಾಡಿದ್ದು, ಲೆಗ್ ಸೈಡ್ ಗೆ ಹೆಜ್ಜೆ ಇಟ್ಟು, ಅದನ್ನು ಕವರ್ ಡ್ರೈವ್ ಮೂಲಕ ಹೊಡೆಯುವುದು ಅಪೂರ್ವ ಎಂದು ಕಮೆಂಟ್ ಮಾಡಿದೆ. ಇಂಥ ಶಾಟ್ ನ್ನು ನೀವು ಹಿಂದೆ ಎಂದಾದರೂ ಕಂಡಿದ್ದೀರಾ ಎಂದು ಪ್ರಶ್ನಿಸಿದೆ.
ಇನ್ನು ಈ ಜನಪ್ರಿಯತೆಗೆ ಜ್ಯೋತಿ ಅಚ್ಚರಿಗೊಂಡಿದ್ದು, ನಾನು ನನ್ನ‌ ಫ್ರೀ ಟೈಂನಲ್ಲಿ ಕ್ರಿಕೆಟ್ ಆಡುತ್ತೇನೆ. ಹೀಗೆ ಆಡುವಾಗ ಹೊಡೆದ ಶಾಟ್ ಈ ಮಟ್ಟಕ್ಕೆ ಫೇಮಸ್ ಆಗುವ ನೀರಿಕ್ಷೆ ಇರಲಿಲ್ಲ ಎಂದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು ಲಕ್ಷಾಂತರ ಜನರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.

https://twitter.com/ESPNcricinfo/status/1271133972211220480?ref_src=twsrc%5Etfw%7Ctwcamp%5Etweetembed%7Ctwterm%5E1271133972211220480&ref_url=https%3A%2F%2Fwww.kannadaprabha.com%2Fcricket%2F2020%2Fjun%2F13%2Fmangaluru-girls-cover-drive-in-courtyard-attracts-cricket-worlds-attention-421265.html

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!