Tuesday, April 13, 2021

ದೆಹಲಿಯಲ್ಲಿ ಇಂದಿನಿಂದ ಭೂ ಸೇನಾ ಕಮಾಂಡರ್’ಗಳ ಸಭೆ

ನವದೆಹಲಿ: ಭೂ ಸೇನಾ ಕಮಾಂಡರ್ ಗಳ ವಾರ್ಷಿಕ ಸಭೆ ಬುಧವಾರ ನವದೆಹಲಿಯಲ್ಲಿ ಆರಂಭವಾಗಲಿದೆ. ಭೂ ಸೇನಾ ಮುಖ್ಯಸ್ಥ ಎಂ ಎಂ ನರ್ವಾಣೆ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತ – ಚೀನಾ ಗಡಿಯಲ್ಲಿ ಉದ್ನಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಮೇ 29 ರ ತನಕ ಈ ಸಭೆ ಮುಂದುವರಿಯಲಿದೆ. ಭಾರತ ಉಪ ಭೂಖಂಡದಲ್ಲಿನ ಮಿಲಿಟರಿ ಬೆಳವಣಿಗೆಗಳು, ಬದಲಾಗುತ್ತಿರುವ ಯುದ್ಧತಂತ್ರ ಹಾಗೂ ತಂತ್ರಜ್ಞಾನದ ಗರಿಷ್ಟ ಬಳಕೆ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಇದೇ ವೇಳೆ ಭಾರತ- ಚೀನಾ ಗಡಿ ಉದ್ನಿಗ್ನತೆ ಶಮನಗೊಳಿಸಲು ಸ್ಥಳೀಯ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಪ್ರಯತ್ನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದ್ದು, ಅಗತ್ಯ ಕಾರ್ಯತಂತ್ರ ರೂಪಿಸಿದ್ದಾರೆ. ದೇಶದ ಗಡಿ ಹಿತಾಸಕ್ತಿ ವಿಷಯದಲ್ಲಿ ರಾಜೀ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತ ಚೀನಾಕ್ಕೆ ರವಾನಿಸಿದೆ.

ಮತ್ತಷ್ಟು ಸುದ್ದಿಗಳು

Latest News

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೋಂ ಕ್ವಾರಂಟೈನ್

newsics.com ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಮುಖ್ಯಮಂತ್ರಿ ಕಚೇರಿಯ ಕೆಲವು ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ...

ಬೆಂಗಳೂರಿನಲ್ಲಿ 5500 ಕೊರೋನಾ ಸೋಂಕು, ರಾಜ್ಯದಲ್ಲಿ 8778 ಪ್ರಕರಣ, 67 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಯುಗಾದಿ ದಿನದಂದು ಕೂಡ ಕೊರೋನಾ ಅಬ್ಬರ ಮುಂದುವರಿದಿದೆ. ರಾಜ್ಯದಲ್ಲಿ ಹೊಸದಾಗಿ 8778 ಮಂದಿಗೆ ಕೊರೋನಾ ಸೋಂಕು ತಗುಲಿದೆ.  ಬೆಂಗಳೂರಿನಲ್ಲಿ ಹೊಸದಾಗಿ 5500 ಕೊರೋನಾ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಕೊರೋನಾ ಒಂದೇ ದಿನ...

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ ನಿವಾಸಿ 58 ಡಯಾಲಿಸಿಸ್'ಗೆ ಬಂದಿದ್ದ ಮಹಿಳೆಗೆ...
- Advertisement -
error: Content is protected !!