ನವದೆಹಲಿ: ದೇಶಕ್ಕೆ ಎದುರಾಗುವ ಯಾವುದೇ ಮಿಲಿಟರಿ ಸವಾಲುಗಳನ್ನು ಎದುರಿಸಲು ಭೂ ಸೇನೆ ಸಶಕ್ತವಾಗಿದೆ ಎಂದು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರ್ವಾಣೆ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು ಸೇನೆ, ಸಂವಿಧಾನಕ್ಕೆ ಬದ್ದವಾಗಿದೆ. ಸಂವಿಧಾನಕ್ಕೆ ಬದ್ಧವಾಗಿ ಸೇನೆ ಕರ್ತವ್ಯ ನಿರ್ವಹಿಸಲಿದೆ ಎಂದು ಹೇಳಿದರು. ಅಧಿಕಾರಿಗಳ ಕೊರತೆ ಬಗ್ಗೆ ಪ್ರಸ್ತಾಪಿಸಿದ ಅವರು, ಕಾರ್ಯದಕ್ಷತೆಯಲ್ಲಿ ರಾಜೀ ಮಾಡಿಕೊಳ್ಳಲು ಸೇನೆ ಬಯಸುತ್ತಿಲ್ಲ. ಇದು ಅಧಿಕಾರಿಗಳ ಕೊರತೆಗೆ ಒಂದು ಕಾರಣ ಎಂದು ಹೇಳಿದರು.