Friday, January 21, 2022

ಇಂದು ಅರ್ನಾಬ್ ಗೋ ಸ್ವಾಮಿ ಜಾಮೀನು ಅರ್ಜಿ ವಿಚಾರಣೆ

Follow Us

Newsics.com

ಮುಂಬೈ:  ನ್ಯಾಯಾಂಗ ಬಂಧನದಲ್ಲಿರುವ ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಅರ್ನಾಬ್ ಗೋ ಸ್ವಾಮಿ ಜಾಮೀನು ಅರ್ಜಿ ವಿಚಾರಣೆ ಇಂದು ಬಾಂಬೈ ಹೈಕೋರ್ಟ್ ನಲ್ಲಿ ನಡೆಯಲಿದೆ.  ಅರ್ನಾಬ್ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ರದ್ದುಪಡಿಸಬೇಕು ಮತ್ತು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಅರ್ನಾಬ್ ಪರ ವಕೀಲರು  ನ್ಯಾಯಾಲಯಕ್ಕೆ ಮನವಿಮಾಡಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸುವ ಸಾಧ್ಯತೆಯಿದೆ. ಅರ್ನಾಬ್ ಜಾಮೀನಿನ ಮೇಲೆ ಬಿಡುಗಡೆಯಾದರೆ ತನಿಖೆಯ ಮೇಲೆ ಪ್ರಭಾವ ಬೀರಲಿದ್ದಾರೆ ಎಂಬ ವಾದವನ್ನು ಸರ್ಕಾರದ ಪರ ವಕೀಲರು  ಮಂಡಿಸುವ ಸಾಧ್ಯತೆಯಿದೆ.

ನ್ಯಾಯಾಂಗ ಬಂಧನದಲ್ಲಿರುವ ಅರ್ನಾಬ್ ಅವರನ್ನು ಇದೀಗ ಅಲಿಭಾಗ್ ನಲ್ಲಿ ಇರಿಸಲಾಗಿದೆ. ಅಲಿಭಾಗ್ ನಲ್ಲಿರುವ ಶಾಲೆಯನ್ನು ತಾತ್ಕಾಲಿಕ ಜೈಲು ಆಗಿ ಪರಿವರ್ತಿಸಲಾಗಿದೆ.  ಕೊರೋನಾ ಹಿನ್ನೆಲೆಯಲ್ಲಿ ಅರ್ನಾಬ್ ಗೋ ಸ್ವಾಮಿಯನ್ನು ಈ ಜೈಲ್ಲಿನಲ್ಲಿ ಇರಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಪತಿಯ ಹತ್ಯೆಗೆ ಬಂದವರಿಗೆ ಖಾರದ ಪುಡಿ ಎರಚಿ ಪ್ರಾಣ ಉಳಿಸಿದ ಮಹಿಳೆ

newsics.com ಹೈದರಾಬಾದ್‌ : ಪತಿಯ ಹತ್ಯೆಗೆ ಬಂದಿದ್ದ ನಾಲ್ವರ ಕಣ್ಣಿಗೆ ಖಾರದ ಪುಡಿ ಬಿಸಾಡಿ   ಪತಿಯನ್ನು ಉಳಿಸಿಕೊಂಡ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ ನಡೆದಿದೆ. ದಿ ವಾರಂಗಲ್ ಜಿಲ್ಲಾ ಲಾರಿ...

ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ಜೀವಂತ ಹೃದಯ ರವಾನೆ

newsics.com ಮೈಸೂರು: ಮೆದುಳು ನಿಷ್ಕ್ರಿಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹೃದಯವನ್ನು ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ರವಾನೆ ಮಾಡಲಾಗಿದೆ. ಜನವರಿ 18ರಂದು ರಸ್ತೆ ಅಪಘಾತದಿಂದ ದರ್ಶನ್(24) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯುವಕನ ಮೆದುಳು ನಿಷ್ಕ್ರಿಯವಾಗಿದ್ದ ಕಾರಣ ಅವರ...

ಒಂದೇ ಮೊಬೈಲ್ ಸಂಖ್ಯೆಯಿಂದ ಇನ್ನುಮುಂದೆ ಆರು ಮಂದಿ ಕೋವಿಡ್ ಲಸಿಕೆ ನೋಂದಾಯಿಸಬಹುದು

newsics.com ನವದೆಹಲಿ: ಕೋವಿಡ್ ಲಸಿಕೆಯನ್ನು ಹಾಕಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು  ತಿಳಿಸಿದೆ. ಮೊದಲು ಒಂದು ಮೊಬೈಲ್ ಸಂಖ್ಯೆಯ ಮೂಲಕ  ನಾಲ್ಕು...
- Advertisement -
error: Content is protected !!