Wednesday, October 5, 2022

ಅರ್ನಾಬ್ ಗೋ ಸ್ವಾಮಿಯನ್ನು ಜೈಲಿಗೆ ಕರೆದೊಯ್ಯುತ್ತಿರುವ ಅಧಿಕಾರಿಗಳು

Follow Us

Newsics.com

ಮುಂಬೈ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಅರ್ನಾಬ್ ಗೋ ಸ್ವಾಮಿಯನ್ನು ಪೊಲೀಸರು ಇದೀಗ ಜೈಲ್ಲಿಗೆ ಕರೆದೊಯ್ಯುತ್ತಿದ್ದಾರೆ.  ನವಿ ಮುಂಬೈ ಬಳಿ ಇರುವ ತಲೋಜಾ ಜೈಲಿಗೆ ಅವರನ್ನು ಕರೆದು ಕೊಂಡು ಹೋಗುತ್ತಿದ್ದಾರೆ

ಅಲಿಭಾಗ್ ನ್ಯಾಯಾಲಯ ಅರ್ನಾಬ್ ಗೋ ಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಕೊರೋನಾ ಕಾರಣದಿಂದಾಗಿ ಅಲಿ ಭಾಗ್ ನಲ್ಲಿರುವ ಶಾಲೆಯಲ್ಲಿ ಅವರನ್ನು ಇರಿಸಲಾಗಿತ್ತು. ಈ ಶಾಲೆಯನ್ನು ತಾತ್ಕಾಲಿಕ ಜೈಲು ಆಗಿ ಪರಿವರ್ತಿಸಲಾಗಿತ್ತು.

77 ಎಕರೆ ಪ್ರದೇಶದಲ್ಲಿ ಇರುವ ತಲೋಜಾ ಜೈಲ್ಲಿನಲ್ಲಿ ಭೂಗತ ಪಾತಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಬು ಸಲೇಂ ಮತ್ತು ಅರುಣ್ ಗಾವ್ಳಿಯನ್ನು ಕೂಡ ಇಲ್ಲಿ ಇರಿಸಲಾಗಿದೆ.

ಈ ಮಧ್ಯೆ ಅರ್ನಾಬ್ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಬಾಂಬೆ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಸೋಮವಾರ ನ್ಯಾಯಾಲಯ ತೀರ್ಪು ನೀಡುವ ಸಾಧ್ಯತೆಯಿದೆ.

ಮತ್ತಷ್ಟು ಸುದ್ದಿಗಳು

vertical

Latest News

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...
- Advertisement -
error: Content is protected !!