Thursday, August 18, 2022

ಆತ್ಮಹತ್ಯೆಗೆ ಪ್ರಚೋದನೆಯಡಿ ಅರ್ನಾಬ್ ಗೊ ಸ್ವಾಮಿ ಬಂಧನ?

Follow Us

Newsics.com

ಮುಂಬೈ: ಸದ್ಯ ಸುದ್ದಿಯಲ್ಲಿರುವ ಟಿ ಆರ್ ಪಿ ಹಗರಣಕ್ಕೂ ಆರ್ನಾಬ್ ಗೋ ಸ್ವಾಮಿ ಪೊಲೀಸ್ ವಶಕ್ಕೂ ಸಂಬಂಧ ಇಲ್ಲ. ಬದಲಾಗಿ  2018ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಾಬ್ ಗೋ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ಇಂಟೇರಿಯರ್ ಡಿಸೈರ್ ಆಗಿದ್ದ ಅನ್ವ ಯ್ ನಾಯಕ್ ಸ 2018ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮಗನ ಸಾವಿನ ಸುದ್ದಿ ತಿಳಿದ ಅವರ ತಾಯಿ ಕುಮುದ್ ನಾಯಕ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅರ್ನಾಬ್ ಮತ್ತು ಇತರ ಕೆಲವು ಮಂದಿ 5.4 ಕೋಟಿ ರೂಪಾಯಿ ನೀಡಬೇಕಾಗಿದೆ. ಅದನ್ನು ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂಬ ಪತ್ರ ಅನ್ವಯ್ ನಾಯಕ್ ಬರೆದಿದ್ದರು ಎಂದು ಕೂಡ ಹೇಳಲಾಗುತ್ತಿದೆ.

ಈ ಕುರಿತು ವಿಚಾರಣೆ ನಡೆಸಿದ ಆಲಿಭಾಗ್ ಪೊಲೀಸರು  ಪ್ರಕರಣ ಕೊನೆಗೊಳಿಸಿದ್ದರು.  ಬಳಿಕ ಮೇ ತಿಂಗಳಲ್ಲಿ ಅನ್ವಯ್ ಅವರ ಮಗಳು ನೀಡಿದ ದೂರಿನ ಮೇರೆಗೆ ಪ್ರಕರಣದ ಮರು ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿತ್ತು.

ಇದರ ಮುಂದುವರಿದ ಭಾಗವಾಗಿ  ಅರ್ನಾಬ್ ಗೋ ಸ್ವಾಮಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅತ್ತೆ, ಮಾವ, ಪತ್ನಿ ಮತ್ತು ಮಗನ ಮೇಲೆ ಪೊಲೀಸರಿಂದ ಹಲ್ಲೆ: ಅರ್ನಾಬ್ ಆರೋಪ

ಮತ್ತಷ್ಟು ಸುದ್ದಿಗಳು

vertical

Latest News

ಮಸೀದಿಯಲ್ಲಿ ಬಾಂಬ್ ಸ್ಫೋಟ: 21 ಮಂದಿ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

newsics.com ಕಾಬೂಲ್‌(ಅಫ್ಘಾನಿಸ್ತಾನ): ಕಾಬೂಲ್‌ನಲ್ಲಿ ಮಸೀದಿಯೊಂದರ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದು, 21 ಜನ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಾಬೂಲ್‌ನ ಖೈರ್ ಖಾನಾ ಪ್ರದೇಶದ ಮಸೀದಿಯಲ್ಲಿ...

ರಾಜ್ಯದಲ್ಲಿಂದು 886 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆ, ಮೂವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 886 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ 1,999 ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 8,764ರಷ್ಟಾಗಿದೆ....

ವೃದ್ಧರಿಗೆಂದೇ ಇರುವ ಸ್ಟಾರ್ಟಪ್‌ನಲ್ಲಿ ರತನ್‌ ಟಾಟಾ ಹೂಡಿಕೆ

newsics.com ಬೆಂಗಳೂರು: ವೃದ್ಧರಿಗೆ ಜತೆಯಾಗಿದ್ದುಕೊಂಡು ಸೇವೆ ಸಲ್ಲಿಸಲೆಂದು ಆರಂಭವಾಗಿರುವ ಸ್ಟಾರ್ಟಪ್‌ ಕಂಪನಿಯಲ್ಲಿ ಹಿರಿಯ ಉದ್ಯಮಿ ರತನ್ ಟಾಟಾ ಹೂಡಿಕೆ ಮಾಡಲು ಮುಂದಾಗಿದ್ದಾರೆ. ದೇಶಾದ್ಯಂತ ಸುಮಾರು 5 ಕೋಟಿ ವೃದ್ಧರು ಸಂಗಾತಿಗಳಿಲ್ಲದೇ ಒಂಟಿಯಾಗಿದ್ದಾರೆ. ಅವರಿಗೆ ಈ ಕಂಪನಿ...
- Advertisement -
error: Content is protected !!