newsics.com
ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕ ಪೀಟರ್ ಕೇರ್ಕರ್’ನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ.
ಯೆಸ್ ಬ್ಯಾಂಕ್ ಗೆ ಸಾಲ ಪಾವತಿಸಬೇಕಿದ್ದ ಕಂಪನಿಗಳ ಪೈಕಿ ಕಾಕ್ಸ್ ಅಂಡ್ ಕಿಂಗ್ಸ್ ಕೂಡ ಒಂದು. ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ನಡೆಸುವ ವೇಳೆ ಇ.ಡಿ.ಯಿಂದ ಕಾಕ್ಸ್ ಅಂಡ್ ಕಿಂಗ್ಸ್ ನ ಆಂತರಿಕ ಲೆಕ್ಕಾಧಿಕಾರಿ ನರೇಶ್ ಜೈನ್ ಹಾಗೂ ಸಿಎಫ್ ಒ ಅನಿಲ್ ಖಂಡೇವಾಲ್ ಎಂಬಿಬ್ಬರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ಅಡಿಯಲ್ಲಿ ಬಂಧಿಸಲಾಗಿತ್ತು.
ಯೆಸ್ ಬ್ಯಾಂಕ್ ನಿಂದ ಕಾಕ್ಸ್ ಅಂಡ್ ಕಿಂಗ್ಸ್ ಗೆ ಮಂಜೂರು ಮಾಡಿದ್ದ 3642 ಕೋಟಿ ರುಪಾಯಿ ಸಾಲದಲ್ಲಿ ಅಕ್ರಮದ ಆರೋಪ ಪತ್ತೆ ಹಚ್ಚಲಾಗಿತ್ತು. ಭಾರತದಾದ್ಯಂತದ ವಿವಿಧ ಬ್ಯಾಂಕ್ ಗಳು ಸಾಲ ನೀಡಿದ್ದು, ಅದನ್ನು ವಾಪಸ್ ಮಾಡಿಲ್ಲ. ಆಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಗೆ ಕಾಕ್ಸ್ ಅಂಡ್ ಕಿಂಗ್ಸ್ ನಿಂದ ಸಾಲ ವಾಪಸ್ ಆಗಬೇಕಿದೆ.
ಕಾಕ್ಸ್ ಅಂಡ್ ಕಿಂಗ್ಸ್ ಸ್ಥಾಪನೆ ಆಗಿದ್ದು 1758ರಲ್ಲಿ. ಅದರ ಮುಖ್ಯ ಕಚೇರಿ ಯುಕೆ ಹಾಗೂ ಭಾರತದಲ್ಲಿದ್ದು, ಕಾಕ್ಸ್ ಅಂಡ್ ಕಿಂಗ್ಸ್ ಒಂದು ಕಾಲದಲ್ಲಿ ಭಾರತದ ಟಾಪ್ ಟೂರ್ ಮತ್ತು ಟ್ರಾವೆಲ್ ಕಂಪನಿಗಳಲ್ಲಿ ಒಂದಾಗಿತ್ತು. ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. ಕಳೆದ ವರ್ಷದಿಂದ ಅದರ ಕುಸಿತ ಶುರುವಾಗಿತ್ತು.
ಭಜರಂಗ್ ಪೂನಿಯಾ- ಸಂಗೀತಾ ಪೋಗಟ್ ಮದುವೆ
ಸಂವಿಧಾನವೇ ನಮ್ಮ ಅಸ್ಮಿತೆ
ದೇಶದ ಐಟಿ ಪಿತಾಮಹ, ಟಿಸಿಎಸ್ ಸಂಸ್ಥಾಪಕ ಕೊಹ್ಲಿ ಇನ್ನಿಲ್ಲ