Tuesday, March 9, 2021

21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯ ತಿರುವನಂತಪುರಂ ಮುಂದಿನ ಮೇಯರ್!

newsics.com
ತಿರುವನಂತಪುರಂ: ಅತಿ ಕಿರಿಯ ವಯಸ್ಸಿನಲ್ಲೇ ಈ ವಿದ್ಯಾರ್ಥಿನಿ ಮೇಯರ್ ಆಗುತ್ತಿದ್ದಾರೆ.
ತಿರುವನಂತಪುರಂನ ಮುಂದಿನ ಮೇಯರ್ ಆಗಿ 21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಮೂಲಕ ಆರ್ಯ ಅವರು ರಾಜ್ಯದ ಅತ್ಯಂತ ಕಿರಿಯ ಮೇಯರ್ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ, ಇಂದು ಆರ್ಯ ಅವರನ್ನು ಭೇಟಿ ಮಾಡಿದ್ದು, ಮೇಯರ್ ಹುದ್ದೆಗೆ ಯುವಕರನ್ನು ಪರಿಗಣಿಸಲು ನಿರ್ಧರಿಸಿದ್ದರಿಂದ ಪಕ್ಷ ಬಿಎಸ್ಸಿ ವಿದ್ಯಾರ್ಥಿನಿಯ ಹೆಸರನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.
ಸಿಪಿಎಂ ಅಭ್ಯರ್ಥಿ ಆರ್ಯ, ಮುದವನ್ಮುಗಲ್ ವಾರ್ಡ್‌ನಿಂದ ಯುಡಿಎಫ್ ಅಭ್ಯರ್ಥಿ ಶ್ರೀಕಾಲ ಅವರ ವಿರುದ್ಧ 2872 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಜಿಲ್ಲೆಯ ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದಾರೆ. ಆರ್ಯ ಅವರು ತಿರುವನಂತಪುರಂನಲ್ಲಿರುವ ಆಲ್ ಸೇಂಟ್ಸ್ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದು, ಬಾಲಾ ಸಂಘದ ರಾಜ್ಯಾಧ್ಯಕ್ಷೆ ಮತ್ತು ಸಿಪಿಎಂನ ವಿದ್ಯಾರ್ಥಿ ವಿಭಾಗವಾದ ಎಸ್‌ಎಫ್‌ಐನ ರಾಜ್ಯ ಪದಾಧಿಕಾರಿಯಾಗಿದ್ದಾರೆ.
ಆರ್ಯ ಅವರು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿಲ್ಲ. ಅವರ ತಂದೆ ರಾಜೇಂದ್ರನ್ ಅವರು ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಶ್ರೀಲತಾ ಅವರು ಎಲ್‌ಐಸಿ ಏಜೆಂಟ್ ಆಗಿದ್ದಾರೆ.
ನಾನು ಈಗ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಮುಂದೆ ಪಕ್ಷ ನನಗೆ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಆರ್ಯ ಅವರು ಹೇಳಿದ್ದಾರೆ.

ಟರ್ಕಿಯಲ್ಲಿ ಚಿನ್ನದ ಭಾರೀ ನಿಕ್ಷೇಪ ಪತ್ತೆ

ಕಾಶ್ಮೀರ ವಶ ಬಳಿಕ ಎಲ್ಲ ಕಡೆಯಿಂದ ಭಾರತದ ಮೇಲೆ ದಾಳಿ- ಶೋಯಿಬ್ ಅಖ್ತರ್

ಸೂಪರ್ ಸ್ಟಾರ್ ರಜನಿಕಾಂತ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಮತ್ತಷ್ಟು ಸುದ್ದಿಗಳು

Latest News

ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಸಾಧ್ಯತೆ

newsics.com ಡೆಹ್ರಾಡೂನ್:  ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಸಂಜೆ ನಾಲ್ಕು ಗಂಟೆಗೆ ಅವರು ರಾಜ್ಯಪಾಲರನ್ನು ಭೇಟಿ...

ಕೊರೋನಾ ಲಸಿಕೆ ಪಡೆದ 48 ಗಂಟೆ ತನಕ ವಿಮಾನ ಚಲಾಯಿಸುವಂತಿಲ್ಲ

newsics.com ನವದೆಹಲಿ:  ಕೊರೋನಾ ಲಸಿಕೆ ಸ್ವೀಕಾರ ಸಂಬಂಧ ವಿಮಾನಯಾನ ಸಿಬ್ಬಂದಿಗೆ ನಾಗರಿಕ ವಿಮಾನಯಾನ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ವಿಮಾನದ ಪೈಲಟ್ ಮತ್ತು ಇತರ ಸಿಬ್ಬಂದಿ ಕೊರೋನಾ ಲಸಿಕೆ ಪಡೆದಿದ್ದರೆ ಇದನ್ನು ಕಟ್ಟು ನಿಟ್ಟಾಗಿ...

ಧೂಪದ ಮರ ಕಡಿಯುವಾಗ ಸಿಲುಕಿ ಮೂವರು ಯುವಕರ ಸಾವು

newsics.comಮಂಗಳೂರು: ಧೂಪದ ಮರ‌ ಕಡಿಯುವ ವೇಳೆ ಮೂವರು ಮರದಡಿ ಸಿಲುಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಸಮೀಪ ಮಂಗಳವಾರ ನಡೆದಿದೆ.ಪಟ್ರಮೆ ಗ್ರಾಮದ ಅನಾರು ಬಳಿ‌...
- Advertisement -
error: Content is protected !!