newsics.com
ಮುಂಬೈ: ರೇವ್ ಪಾರ್ಟಿ ಆರೋಪದ ಹಿನ್ನೆಲೆಯಲ್ಲಿ ಆರ್ಯನ್ ಖಾನ್ ಬಂಧನವಾಗಿರುವ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಜಾಹೀರಾತಿಗೆ ಕತ್ತರಿ ಬಿದ್ದಿದೆ.
ಖ್ಯಾತ ಆನ್ ಲೈನ್ ಶಿಕ್ಷಣ ಸಂಸ್ಥೆ ಬೈಜೂಸ್ ಕಳೆದ ಹಲವು ದಿನಗಳಿಂದ ಶಾರುಖ್ ಖಾನ ಅವರ ಜಾಹೀರಾತು ಪ್ರಸಾರ ತಡೆ ಹಿಡಿದಿದೆ. ಶಾರುಖ್ ಖಾನ್ ಬೈಜೂಸ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಶಾರುಖ್ ವಿರುದ್ದ ಟೀಕೆಗಳು ಕೇಳಿ ಬಂದಿದ್ದವು. ಮನೆಯಲ್ಲಿ ಮಗನಿಗೆ ಪಾಠ ಹೇಳಲು ಸಾಧ್ಯವಿಲ್ಲದ ತಂದೆ ದೇಶದ ಮಕ್ಕಳಿಗೆ ಏನು ಪಾಠ ಮಾಡಲು ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸಿದ್ದರು.
ಇದೀಗ ತಾತ್ಕಾಲಿಕವಾಗಿ ಈ ಜಾಹೀರಾತು ಪ್ರಸಾರ ಸ್ಥಗಿತಗೊಳಿಸಲಾಗಿದೆ.
ಆರ್ಯನ್ ಖಾನ್ ಗೆ ಸಿಗದ ಜಾಮೀನು, ಹುಟ್ಟು ಹಬ್ಬ ಆಚರಿಸಿಕೊಳ್ಳದ ಗೌರಿ ಖಾನ್