newsics.com
ಮುಂಬೈ: ವಿಲಾಸಿ ಹಡಗಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಮಧ್ಯಾಹ್ನ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಎನ್ ಸಿ ಬಿ ವಶದಲ್ಲಿದ್ದ ಆರ್ಯನ್ ಖಾನ್ ನನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಂದು ಆರ್ಯನ್ ಖಾನ್ ಅಮ್ಮ ಗೌರಿ ಖಾನ್ ಹುಟ್ಟು ಹಬ್ಬ ಕೂಡ ಆಗಿದೆ. ಜಾಮೀನು ಬಿಡುಗಡೆ ದೊರೆತರೆ ಮನೆಯಲ್ಲಿ ಹುಟ್ಟು ಹಬ್ಬ ಆಚರಿಸಲು ಸಿದ್ದತೆ ಮಾಡಲಾಗಿದೆ.