newsics.com
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮುಂಬೈನ ವಿಶೇಷ ನ್ಯಾಯಾಲಯ ತನ್ನ ಆದೇಶವನ್ನ ಅಕ್ಟೋಬರ್ 20ರವರೆಗೆ ಕಾಯ್ದಿರಿಸಿದೆ.
ಹೀಗಾಗಿ ಅಕ್ಟೋಬರ್ 20ರವರೆಗೆ ಆರ್ಯನ್ ಖಾನ್ ಜೈಲು ವಾಸ ಮುಂದುವರಿದಿದೆ. ಕ್ರೂಸ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಎನ್ ಸಿಬಿ ವಶಕ್ಕೆ ಪಡೆದಿತ್ತು.
ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆದೇಶವನ್ನ ಅಕ್ಟೋಬರ್ 20ರವರೆಗೆ ಕಾಯ್ದಿರಿಸಿದೆ.