newsics.com
ಪಾಟ್ನಾ : ನವಜಾತ ಶಿಶುವಿಗೆ ಚುಚ್ಚು ಮದ್ದು ನೀಡುವ ವಿಚಾರಕ್ಕೆ ಇಬ್ಬರು ಮಹಿಳಾ ಆಶಾ ಕಾರ್ಯಕರ್ತೆಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಿಹಾರದ ಜಮುಯಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಲಕ್ಷ್ಮಿಪುರ ಬ್ಲಾಕ್ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಮಗುವೊಂದು ಜನಸಿದ್ದು, ಆಶಾ ಕಾರ್ಯಕರ್ತೆ ರಿಂತು ಕುಮಾರಿ ಮಗುವಿಗೆ ಚುಚ್ಚು ಮದ್ದು ನೀಡಲು ಮತ್ತೋರ್ವ ಆಶಾ ಕಾರ್ಯಕರ್ತೆ ರಂಜನಾ ಕುಮಾರಿ ಅವರನ್ನ ಸಂಪರ್ಕಿಸಿದ್ದಾಳೆ.ಈ ವೇಳೆ ಲಸಿಕೆ ನೀಡಲು ನರ್ಸ್ 500 ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಆಶಾ ಕಾರ್ಯಕರ್ತೆ ರಂಜನಾ ತಿಳಿಸಿದ್ದಾಳೆ. ಈ ವಿಚಾರಕ್ಕೆ ಚರ್ಚೆ ನಡೆದಿದ್ದು, ಇಬ್ಬರು ಹೊಡೆದಾಡಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿನ ವ್ಯಕ್ತಿಯೋರ್ವ ಅದರ ವಿಡಿಯೋ ಸೆರೆ ಹಿಡಿದಿದ್ದಾರೆ.ಘಟನೆಯ ವಿಡಿಯೋ ವೈದ್ಯಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.