newsics.com
ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನಲ್ಲಿ ಭಾರತ 8ನೇ ದಿನವಾದ ಭಾನುವಾರ ಒಂದೇ ದಿನ 15 ಪದಕ ಬಾಚಿಕೊಂಡಿದೆ.
7ನೇ ದಿನವಾದ ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿತ್ತು. 8ನೇ ದಿನವಾದ ಭಾನುವಾರ ಒಂದೇ ದಿನ 3 ಚಿನ್ನ, 7 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನ ಬಾಚಿಕೊಂಡಿದೆ.
ಒಟ್ಟು 13 ಚಿನ್ನ , 21 ಬೆಳ್ಳಿ ಹಾಗೂ 19 ಕಂಚಿನ ಪದಕಗಳು ಸೇರಿ 53 ಪದಕಗಳು ಭಾರತದ ಪಾಲಾಗಿದ್ದು, ರ‍್ಯಾಂಕಿಂಗ್ ಪಟ್ಟಿಯಲ್ಲಿ 4ನೇ ಸ್ಥಾನ ಭದ್ರಪಡಿಸಿಕೊಂಡಿದೆ.
ಶಾಟ್‌ಪುಟ್ ಸ್ಪರ್ಧೆಯಲ್ಲಿ ಅರೇಬಿಯಾದ ಪ್ರತಿಸ್ಪರ್ಧಿ ಮೊಹಮದ್ ದೌಡಾ ಟೋಲೋ ಅವರನ್ನು ಎದುರಿಸುವ ಮೂಲಕ ಕೊನೇ ಪ್ರಯತ್ನದಲ್ಲಿ ಸಿಕ್ಕ ಅವಕಾಶ ಬಳಸಿಕೊಂಡು ಚಿನ್ನಕ್ಕೆ ಕೊರಳೊಡ್ಡಿದ್ದಾರೆ.