ದೆಹಲಿ: ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಅಟಲ್ ಭೂ ಜಲ ಯೋಜನೆಗೆ ಚಾಲನೆ ನೀಡಿದರು.
ದೆಹಲಿಯ ವಿಜ್ಞಾನ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಹುಟ್ಟುಹಬ್ಬದ ಪ್ರಯುಕ್ತ ಸುಮಾರು 6 ಸಾವಿರ ಕೋಟಿ ರೂ. ವೆಚ್ಚದ ಅಟಲ್ ಭೂ ಜಲ ಯೋಜನೆಗೆ ಮೋದಿ ಚಾಲನೆ ನೀಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯ ಲಾಭವನ್ನು ಕರ್ನಾಟಕ ಸೇರಿದಂತೆ ದೇಶದ ಸುಮಾರು 6 ರಾಜ್ಯಗಳು ಪಡೆಯಲಿವೆ ಎಂದರು.
ನೀರು ಅತೀ ಅಮೂಲ್ಯವಾದದ್ದು, ನಾವು ನಮ್ಮ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕಿದೆ. ಹೀಗಾಗಿ ಮಳೆ ನೀರನ್ನು ಅಂತರ್ಜಲವಾಗಿ ಉಳಿಸುವ ಅಗತ್ಯವಿದ್ದು, ಈ ಕೆಲಸಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಅಂತರ್ಜಲ ಮಟ್ಟ ಹೆಚ್ಚಿಸುವ ‘ಅಟಲ್ ಭೂ ಜಲ್’ ಯೋಜನೆಗೆ ಚಾಲನೆ
Follow Us