ಮುಂಬೈ: ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆಯ ಮೇಲೆ ಗ್ರಾಹಕರು ಪಾವತಿಸುವ ಇಂಟರ್ ಚೇಂಜ್ ಶುಲ್ಕ ಹೆಚ್ಚಳವಾಗುವ ಸಾಧ್ಯತೆಯಿದೆ.
ಶುಲ್ಕ ಹೆಚ್ಚಿಸುವಂತೆ ಕೋರಿ ಭಾರತದ ಎಟಿಎಂ ಆಪರೇಟರ್ಸ್ ಅಸೋಸಿಯೇಷನ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ)ಗೆ ಪತ್ರ ಬರೆದಿದ್ದು, ಆರ್‌ಬಿಐ ಒಪ್ಪಿದರೆ ಎಟಿಎಂ ಬಳಕೆದಾರರಿಗೆ ದೊಡ್ಡ ಹೊರೆಯಾಗಲಿದೆ.
ಪ್ರಸ್ತುತ ಇಂಟರ್ ಚೇಂಜ್ ಶುಲ್ಕವನ್ನು ಆರ್‌ಬಿಐ ಪ್ರತಿ ವಹಿವಾಟಿಗೆ 15 ರೂ. ನಿಗದಿಪಡಿಸಿದೆ, ಪ್ರತಿ ಗ್ರಾಹಕರಿಗೆ ಐದು ಉಚಿತ ವಹಿವಾಟುಗಳಲ್ಲಿ ಹಣವನ್ನು ಡ್ರಾ ಮಾಡಿಕೊಳ್ಳಬಹುದಾಗಿದೆ.
ಒಂದು ಮಿಲಿಯನ್‌ಗಿಂತ ಹೆಚ್ಚಿನ ಜನಸಂಖ್ಯೆ ಇರುವ ನಗರ ಪ್ರದೇಶಗಳಿಗೆ, ಎಟಿಎಂ ಸಮಿತಿಯು ಹಣಕಾಸಿನ ಮೇಲೆ 17 ರೂ ಮತ್ತು ಹಣಕಾಸಿನೇತರ ವಹಿವಾಟಿನ ಮೇಲೆ 7 ರೂ. ಉಚಿತ ಎಟಿಎಂ ಹಿಂಪಡೆಯುವಿಕೆಯನ್ನು ಮೂರಕ್ಕೆ ಇಳಿಸಲು ಹಾಗೂ ಜನಸಂಖ್ಯೆಯು 1 ಮಿಲಿಯನ್‌ಗಿಂತ ಕಡಿಮೆ ಇರುವ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಿಗೆ, ಸಮಿತಿಯು ಹಣಕಾಸುಗಾಗಿ 18 ರೂ. ಮತ್ತು ಹಣಕಾಸಿನೇತರ ವಹಿವಾಟಿಗೆ 8 ರೂ.ಹಣಕಾಸಿನೇತರ ವಹಿವಾಟುಗಳಿಗೆ, ಉಚಿತ ವಹಿವಾಟು ಆರಕ್ಕೆ ಇಳಿಸುವುದಕ್ಕೆ ಮನವಿ ಸಲ್ಲಿಸಿದೆ.
ಎಟಿಎಂ ಇಂಟರ್ ಚೇಂಜ್ ಶುಲ್ಕ ಹೆಚ್ಚಳ ಸಾಧ್ಯತೆ
Follow Us