Saturday, January 23, 2021

ಹೊಲದಲ್ಲಿ ಮೇಯ್ದಿದ್ದಕ್ಕೆ ಎತ್ತಿನ ಕಾಲನ್ನೇ ಕಡಿದ!

newsics.com
ತಂಜಾವೂರು: ಎತ್ತು ಹೊಲವನ್ನು ಮೇಯ್ದಿದ್ದಕ್ಕೆ ಸಿಟ್ಟಾದ ಹೊಲದ ಮಾಲೀಕ ಎತ್ತಿನ ಕಾಲನ್ನೇ ಕಡಿದು ಕ್ರೌರ್ಯ ಮೆರೆದಿದ್ದಾನೆ.
ತಂಜಾವೂರಿನ ಅಗ್ರಹಾರಂನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಆನಂದ್ ದನ ಸಾಕುವ ವ್ಯಕ್ತಿಯಾಗಿದ್ದು, ತಂಜಾವೂರಿನ ಅಗ್ರಹಾರಂನಲ್ಲಿ ವಾಸವಾಗಿದ್ದಾನೆ. ನಿನ್ನೆ ಎತ್ತು ಹೊಡೆದುಕೊಂಡು ಹೋಗಿದ್ದ ವೇಳೆ ಬೇರೆ ವ್ಯಕ್ತಿಯ ಹೊಲದಲ್ಲಿ ಬೆಳೆ ಮೇಯಿಸಿದ್ದಾನೆ ಎನ್ನಲಾಗಿದೆ. ಇದನ್ನು ನೋಡಿದ ಜಮೀನಿನ ಒಡೆಯ ಕಾಮರಾಜ್ ಮಾನವೀಯತೆ ಮರೆತು ಕುಡುಗೋಲಿನಿಂದ ಎತ್ತಿನ ಕಾಲು ಕತ್ತರಿಸಿದ್ದಾನೆ.
ಘಟನೆಯಿಂದ ಎತ್ತಿನ ಕಾಲಿನ ಮೂಳೆಗೆ ಬಲವಾದ ಪೆಟ್ಟಾಗಿರುವುದರಿಂದ ಎತ್ತು ಹೊಲದಲ್ಲೇ ಮಲಗಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಆನಂದ್ ಸ್ಥಳಕ್ಕಾಗಮಿಸಿದ್ದು, ಆಘಾತಕ್ಕೊಳಗಾಗಿದ್ದಾನೆ. ಎತ್ತಿನ ಪರೀಕ್ಷೆ ಮಾಡಿರುವ ಪಶುವೈದ್ಯರು, ಕಾಲಿನ ಮೂಳೆ ತೀವ್ರವಾಗಿ ಹಾನಿಗೊಂಡಿರುವ ಕಾರಣ ಗುಣಪಡಿಸಲಾಗದು ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಡುಕ್ಕವೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಹೊಲದ ಮಾಲೀಕನನ್ನು ಬಂಧಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು,...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...

ಶಿವಮೊಗ್ಗ ದುರಂತ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Newsics.com ಬೆಂಗಳೂರು: ದೇಶವನ್ನು ನಡುಗಿಸಿರುವ ಶಿವಮೊಗ್ಗ ಸಮೀಪದ  ಹುಣಸೋಡು ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಶಿವಮೊಗ್ಗ ನಗರದಿಂದ ಕೇವಲ ಎಂಟು ಕಿಲೋ...
- Advertisement -
error: Content is protected !!