newsics.com
ನವದೆಹಲಿ: ಲಕ್ಷಾಂತರ ಮಂದಿಯ ಬಲಿದಾನ, ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ದೇಶ ವಿಭಜನೆ ವೇಳೆ ಲಕ್ಷಾಂತರ ಮಂದಿ ತಮ್ಮ ಸ್ವಂತ ಊರಿನಿಂದ ಸ್ಥಾನ ಪಲ್ಲಟಗೊಂಡರು. ನಿರ್ಗತಿಕರಾದರು. ಎಲ್ಲವನ್ನು ಕಳೆದುಕೊಂಡರು. ಭಯಾನಕ ಕೃತ್ಯದಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು.
ಅವರ ತ್ಯಾಗ ಬಲಿದಾನವನ್ನು ನೆನಪಿಸಲೇ ಬೇಕು. ಅದಕ್ಕಾಗಿ ಆಗಸ್ಟ್ 14ನ್ನು ವಿಭಜನೆ ಭಯಾನಕ ಕೃತ್ಯದ ಸ್ಮರಣೆ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಸಂಬಂಧ ಅವರು ಟ್ವೀಟ್ ಮಾಡಿದ್ದಾರೆ.