newsics.com
ನವದೆಹಲಿ : ಪ್ರತಿಷ್ಠಿತ ಆಸ್ಟ್ರೇಲಿಯಾ ವಿಶ್ವ ವಿದ್ಯಾಲಯಗಳು ಭಾರತದ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದೆ. ಈ ರಾಜ್ಯಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲು ನಿರ್ಧರಿಸಿದೆ.
ಪಂಜಾಬ್, ರಾಜಸ್ಥಾನ, ಹರ್ಯಾಣ, ಗುಜರಾತ್, ಉತ್ತರ ಪ್ರದೇಶ, ಉತ್ತರಖಂಡದಲ್ಲಿ ವಿದ್ಯಾರ್ಥಿ ವೀಸಾ ಅಕ್ರಮ ಹಚ್ಚಾಗಿದೆ. ಇದು ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ತಲೆನೋವು ಹೆಚ್ಚಿಸಿದೆ. ಹೀಗಾಗಿ ಈ ಉಸಾಬರಿ ಬೇಡ ಎಂದು ಭಾರತದ 6 ರಾಜ್ಯಗಳ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದೆ. ಕಾರಣ ವಿದ್ಯಾರ್ಥಿ ವೀಸಾ ಅಕ್ರಮ.
ಆಸ್ಟ್ರೇಲಿಯಾದ ಟೊರೆನ್ಸ್ ವಿಶ್ವವಿದ್ಯಾಲಯ, ಸೌದರ್ನ್ ಕ್ರಾಸ್ ಯುನಿವರ್ಸಿಟಿ, ಎಡಿತ್ ಕೋವನ್, ವಿಕ್ಟೋರಿಯಾ ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಈ ನಿರ್ಧಾರ ಪ್ರಕಟಿಸಿತ್ತು. ಇದೀಗ ನ್ಯೂ ಸೌಥ್ ವೇಲ್ಸ್, ಫೆಡರೇಶನ್, ವೆಸ್ಟರ್ನ್ ಸಿಡ್ನಿ ಯುನಿವರ್ಸಿಟಿಗಳು ಭಾರತದ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದೆ.