Newsics.com
ನವದೆಹಲಿ: ಆಸ್ಟ್ರೀಯಾದ ರಾಜಧಾನಿ ವಿಯೆನ್ನಾದಲ್ಲಿ ಭಯೋತ್ಪಾದಕರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ರಾಯಭಾರ ಕಚೇರಿಯನ್ನು ಆಸ್ಚ್ರೀಯಾ ತಾತ್ಕಾಲಿಕವಾಗಿ ಬಂದ್ ಮಾಡಿದೆ. ನವೆಂಬರ್ 11ರ ತನಕ ರಾಯಭಾರಿ ಕಚೇರಿ ಮುಚ್ಚಲಿದೆ. ಟ್ವಿಟರ್ ನಲ್ಲಿ ಆಸ್ಟ್ರೀಯಾ ರಾಯಭಾರ ಕಚೇರಿ ಇದನ್ನು ಪ್ರಕಟಿಸಿದೆ.
ಇದೇ ವೇಳೆ ಭಯೋತ್ಪಾದಕರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಭಾರತ ಭಯೋತ್ಪಾದನೆ ವಿರುದ್ದ ಹೋರಾಟದಲ್ಲಿ ಆಸ್ಟ್ರೀಯಾದ ಜತೆಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಇನ್ನೊಂದೆಡೆ ಭಯೋತ್ಪಾದಕರ ದಾಳಿ ಕುರಿತ ತನಿಖೆ ಬಿರುಸುಪಡೆದುಕೊಂಡಿದೆ. ಫ್ರಾನ್ಸ್ ನಲ್ಲಿ ನಡೆದ ದಾಳಿಗೂ ಈ ದಾಳಿಗೂ ಸಂಬಂಧ ಇರುವ ಶಂಕೆ ಇದೀಗ ವ್ಯಕ್ತವಾಗಿದೆ.
ಈ ಬೆಳವಣಿಗೆ ಮಧ್ಯೆ ಫ್ರಾನ್ಸ್ ಮಾಲಿಯಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 50ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಭಯೋತ್ಪಾದಕರ ವಿರುದ್ದದ ಹೋರಾಟ ತೀವ್ರಗೊಳಿಸುವುದಾಗಿ ಫ್ರಾನ್ಸ್ ಎಚ್ಚರಿಕೆ ನೀಡಿದೆ.