ಲಕ್ನೋ: ರಾಮನ ಜನ್ಮ ಭೂಮಿ ಅಯೋಧ್ಯೆ ನಗರವನ್ನು “ಸ್ಮಾರ್ಟ್ ಸಿಟಿ” ಯನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸರಯು ನದಿಯ ದಡದಲ್ಲಿ 151ಮೀಟರ್ ಎತ್ತರದ ಭಗವಾನ್ ರಾಮನ ಪ್ರತಿಮೆ ನಿರ್ಮಿಸಲಾಗುವುದು ಎಂದಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯೊಂದಿಗೆ ಅಯೋಧ್ಯೆಯನ್ನು ದೇಶದ ಪ್ರಮುಖ ತೀರ್ಥ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಅಯೋಧ್ಯ ತೀರ್ಥ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಈ ಎಲ್ಲಾ ಯೋಜನೆಗಳೂ 2021ರೊಳಗೆ ಪೂರ್ಣಗೊಳಿಸುವ ಯೋಜನೆಯಿದೆ ಎಂದಿದ್ದಾರೆ.